Top

ಗೌರಿ ಲಂಕೇಶ್ ಹತ್ಯೆ ಸ್ಕೆಚ್ ರೆಡಿಯಾಗಿದ್ದು ಎಲ್ಲಿ ಗೊತ್ತಾ ?

ಗೌರಿ ಲಂಕೇಶ್ ಹತ್ಯೆ ಸ್ಕೆಚ್ ರೆಡಿಯಾಗಿದ್ದು ಎಲ್ಲಿ ಗೊತ್ತಾ ?
X

[story-lines]

ಬೆಂಗಳೂರು : ಗೌರಿ ಲಂಕೇಶ್ ಹತ್ಯೆ ಸ್ಕೆಚ್ ರೆಡಿಯಾಗಿದ್ದು ಎಲ್ಲಿ ಗೊತ್ತಾ ? ಹೆಸರು ಹೇಳಿದ್ರೇ ನೀವು ಕೂಡ ಶಾಕ್ ಹಾಕ್ತೀರಾ.! ಎಸ್ ಓದುಗರೇ, ನಿಮಗೆ ಶಾಕ್‌ ಆಗೋ ಗೌರಿ ಲಂಕೇಶ್‌ ಹತ್ಯೆಗೆ ಸ್ಕೆಚ್ ರೆಡಿಯಾಗಿದ್ದೇ, ರಾಜ್ಯ ರಾಜಧಾನಿ ಬೆಂಗಳೂರಿನ ಬಿಬಿಎಂಪಿ ಉದ್ಯಾವನದಲ್ಲಿ ಅಂತೆ. ಇನ್ನೂ ಇಂಟ್ರಸ್ಟಿಂಗ್ ವಿಷ್ಯ ಅಂದ್ರೆ ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಕಾಂಪ್ಲೆಕ್ಸ್ ಬಳಿಯ ಪಾರ್ಕಿನಲ್ಲಿ ಅಂತೆ. ಮತ್ತೆನಪ್ಪ ಅಂದ್ರೆ ಗೌರಿ ಹತ್ಯೆಗೆ ಆಕೆ ಹಿಂದೂ ಧರ್ಮದ ವಿರೋಧಿ ನಿಲುವೇ ಮುಳುವಾಯ್ತಂತೆ. ಈ ಎಲ್ಲಾ ಮಾಹಿತಿಯ ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಷೀಟ್‌ ಟಿವಿ5ಗೆ ಲಭ್ಯವಾಗಿದೆ. ಅದರ ಪಿನ್‌ ಟು ಪಿನ್‌ ಮಾಹಿತಿ ಇನ್ನೂ ಕೆಳಗಿದೆ ಓದಿ...

ಬ್ರೇಕಿಂಗ್ ವಿಷಯ 1

  • ಗೌರಿ ಲಂಕೇಶ್ ಹಿಂದುತ್ವ, ಹಿಂದೂ ದೇವತೆ ವಿರುದ್ಧ ಮಾತನಾಡಿದ್ದೇ ಮುಳುವಾಯ್ತು.
  • ಹಿಂದೂ ಧರ್ಮಕ್ಕೆ ಗೌರಿ ಅವಮಾನ ಮಾಡುತ್ತಿದ್ದಾಳೆ ಅನ್ನೋದೇ ಆಕೆಯ ಜೀವ ತೆಗೆಯಿತು.
  • ಗೌರಿ ಹತ್ಯೆಗೆ ಸಂಚು ರೂಪಿಸಿದ್ದೇ ಕೆ.ಟಿ.ನವೀನ್ ಕುಮಾರ್.
  • ಪ್ರವೀಣ ಅಲಿಯಾಸ್ ಸುಜಿತ್ ಕುಮಾರ್.
  • ವಿಜಯ ನಗರದ ಬಿಬಿಎಂಪಿ ಪಾರ್ಕ್‌ನಲ್ಲಿ ಕುಳಿತು ಹತ್ಯೆಗೆ ಸ್ಕೆಚ್‌ ಹಾಕಿದ್ರಂತೆ.!
  • ಕೆ ಟಿ ನವೀನ್ ಕುಮಾರ್ ಪೊಲೀಸರಿಗೆ ಹತ್ಯೆ ಸ್ಕೆಚ್ ಹಾಕಿದ್ದ ಜಾಗ ತೋರಿದ್ದನಂತೆ..!

ಬ್ರೇಕಿಂಗ್ ವಿಷಯ 2

  • ನವೀನ್ ಮದ್ದು ಗುಂಡು ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ.
  • ನವೀನ್ ಮತ್ತು ಪ್ರವೀಣ್ ಒಟ್ಟಾಗಿಯೇ ಗೌರಿ ಹತ್ಯೆಗೆ ಸ್ಕೆಚ್ ಹಾಕಿದ್ರು..!
  • ನವೀನ್ ಮತ್ತು ಪ್ರವೀಣ್ ಸಂಭಾಷಣೆ ತಾಂತ್ರಿಕ ತನಿಖೆಯಿಂದ ಸಾಬೀತು.
  • ಗೌರಿ ಹತ್ಯೆಯ ಸ್ಕೆಚ್ ಬಗ್ಗೆ ಮಾತನಾಡಿಕೊಂಡಿದ್ದ ಆರೋಪಿಗಳು.
  • ಗೌರಿಯನ್ನು ಕೊಂದ ಹಂತಕರ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರೋ ನವೀನ್.
  • ಉದ್ದೇಶಪೂರ್ವಕವಾಗಿಯೇ ಗೌರಿ ಹಂತಕರ ಬಗ್ಗೆ ಮಾಹಿತಿ ನೀಡದ ನವೀನ್.

ಬ್ರೇಕಿಂಗ್ ವಿಷಯ 3

  • ನವೀನ್ ಮತ್ತು ಪ್ರವೀಣ್ ನಿರಂತರ ಫೋನ್ ಸಂಪರ್ಕ..!
  • ನವೀನ್ ಬಂಧನದ ನಂತರ ತಲೆಮರೆಸಿಕೊಂಡಿದ್ದ ಪ್ರವೀಣ್..
  • ಫೋನ್ ಸಂಭಾಷಣೆಯ ಧ್ವನಿ ಮ್ಯಾಚ್ ಆಗಿದೆ ಎಂದು ತನಿಖೆಯಿಂದ ಸಾಭೀತು.
  • ಗೌರಿಯ ಹತ್ಯೆಯ ಬಳಿಕವೂ ನವೀನ್, ಪ್ರವೀಣ್ ಮಾತನಾಡಿರೋ ಮಾಹಿತಿ.
  • ನವೀನ್, ಪ್ರವೀಣ್ ಇಬ್ಬರಿಗೂ ಗೊತ್ತಿಗೆ ಗೌರಿಗೆ ಗುಂಡಿಟ್ಟ ಹಂತಕ.
  • ನವೀನ್ ,ಪ್ರವೀಣ್ ಗೆ ಮಂಪರು ಪರೀಕ್ಷೆಗೆ ಹಾಜರು ಪಡಿಸೋ ಸಾಧ್ಯತೆ.
  • ಚಾರ್ಜ್ ಶೀಟ್ ಉಲ್ಲೇಖವಾಗಿವೆ ಈ ಎಲ್ಲಾ ಅಂಶಗಳು.

ಈ ಎಲ್ಲಾ ಪ್ರಮುಖ ಅಂಶಗಳು ಎಸ್‌ಐಟಿ ಅಧಿಕಾರಿಗಳು ಸುಮಾರು 600ಕ್ಕೂ ಹೆಚ್ಚು ಪುಟಗಳಲ್ಲಿ ಸರ್ಕಾರಕ್ಕೆ ಸಲ್ಲಿಸಿದ ವರದಿಗಳಲ್ಲಿ ತಿಳಿಸಿದ್ದಾರೆ. ಇಂತಹ ಮಹತ್ವದ ವರದಿಯಲ್ಲಿನ ಅಂಶಗಳು ಇವೆಲ್ಲಾ ಆಗಿದ್ದು, ದಿನ ದಿನಕ್ಕೂ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಕೇಸ್‌ ಹೊಸ ಹೊಸ ತಿರುವನ್ನು ಪಡೆಯುತ್ತಿದೆ. ಈ ಮೂಲಕ ಹತ್ಯೆಯ ಹಿಂದಿನ ಜಾಲವನ್ನು ಕದಂಬ ಬಾಹುವಿನಂತೆ ಚಾಚಿಕೊಳ್ಳುತ್ತಾ ಸಾಗುತ್ತಿದೆ.

ಇದೀಗ ವಿಶೇಷ ತನಿಖಾ ದಳದ ಅಧಿಕಾರಿಗಳು ತನ್ನ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರ ಹಂತಕ ಬಗ್ಗೆ ಯಾವ ನಿಲುವನ್ನು ತಳೆಯುತ್ತದೆ. ಈ ಎಲ್ಲಾ ಮಾಹಿತಿ ಆದರಿಸಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Next Story

RELATED STORIES