Top

ಒಂದು ನಾಯಿ ಉಳಿಸಲು ಹೋಗಿ ಐವರ ಬಲಿ ಪಡೆದ ಅಪಘಾತ

ಒಂದು ನಾಯಿ ಉಳಿಸಲು ಹೋಗಿ ಐವರ ಬಲಿ ಪಡೆದ ಅಪಘಾತ
X

[story-lines]

ಕಲಬುರ್ಗಿ : ಇದೊಂದು ಸಿನಿಮಾ ಮಾದರಿಯಲ್ಲಿ ನಡೆದ ಅಪಘಾತ. ಅಷ್ಟೇ ಘನಘೋರ ಘಟನೆ. ಒಂದು ನಾಯಿ ಉಳಿಸಲು ಹೋದ ಬಸ್ ಚಾಲಕನ ಕಳಕಳಿಗೆ, ಕಣ್ ಮುಚ್ಚಿ ಕಣ್ ಬಿಡುವುದರೊಳಗೆ ಐವರು ಸಾವಿನ ಮನೆಯನ್ನ ಸೇರಿ ಬಿಟ್ಟರು. 8ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆ ಸೇರಿದರು.

ಈ ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾಗಿದ್ದು, ಕಲಬುರ್ಗಿಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಕೆಎಸ್‌ಆರ್‌ಟಿಸಿ ಬಸ್‌ಗಳೆರಡು ಮುಖಾಮುಖಿ ಡಿಕ್ಕಿಯಾಗಿ. ಬೆಳಿಗ್ಗೆ ಮಕ್ಕಳಿಗೆ ಶಾಲೆಗೆ ತೆರಳಿ ಪ್ರಾರ್ಥನೆ, ನಾಡಗೀತೆ, ರಾಷ್ಟ್ರಗೀತೆ ಶುರುಮಾಡಿ ಅಕ್ಷರ ಜ್ಞಾನದ ಕೈದೀವಿಗೆ ಹಿಡಿದು ನಡೆಸಬೇಕಾದ ಮೂವರು ಶಿಕ್ಷಕಿಯರು ದಾರುಣವಾಗಿ ಸಾವನ್ನಪ್ಪುವಂತಾಯಿತು.

ನಾಯಿ ಪ್ರಾಣ ಉಳಿಸಲು ಹೋಗಿ ಐವರ ಬಲಿ

ಅಂದಹಾಗೇ, ಐವರನ್ನು ಬಲಿ ಪಡೆದು, 8ಕ್ಕೂ ಹೆಚ್ಚು ಜನರಿಗೆ ಗಾಯಗೊಂಡ ಅಪಘಾತಕ್ಕೆ ಕಾರಣ ಒಂದು ನಾಯಿ. ರಸ್ತೆಯಲ್ಲಿ ಏಕಾಏಕಿ ಅಡ್ಡಬಂದ ನಾಯಿಯ ಜೀವ ಉಳಿಸಲು ಹೋದ ಚಾಲಕನ ಕಾಳಜಿಯೇ, ಇಂತಹ ಮೂವರು ಶಿಕ್ಷಕಿಯರು, ಚಾಲಕ, ಮತ್ತೊರ್ವ ಪ್ರಯಾಣಿಕನನ್ನು ಸಾವಿನ ವಿದಾಯಕ್ಕೆ ದೂಡಿಬಿಟ್ಟಿತು. ಮೃತರ ಮನೆಯವರಲ್ಲಿ ಅಕ್ರಂದನದ ಮುಗಿಲು ಮುಟ್ಟಿಸಿತು.

ಥೇಟ್‌ "ಜರ್ನಿ" ಸಿನಿಮಾ ಮಾದರಿಯಲ್ಲಿ ಅಪಘಾತ

ಇತ್ತೀಚಿಗೆ "ಜರ್ನಿ" ಹೆಸರಿನ ಹಿಂದಿ ಸಿನೆಮಾವೊಂದು ಬಂದಿತ್ತು. ಎರಡು ಬಸ್ಸುಗಳು ಡಿಕ್ಕಿಯಾಗಿ ಬಸ್ಸಲ್ಲಿದ್ದವರು ಹೊರಗೆ ಬಿದ್ದು ಸಾವನ್ನಪ್ಪುವ ಭಯಾನಕ ಸೀನ್ ಅದು. ಥೇಟ್ ಅದೇ ಸಿನೆಮಾ ಶೈಲಿಯಲ್ಲಿ ಶನಿವಾರ ಬೆಳಿಗ್ಗೆ ಜೇವರ್ಗಿ ಬಳಿ ನಡೆದ ಭೀಕರ ಅಪಘಾತ ಸಾಕ್ಷಿಯಾದಂತಿದೆ.

15 ನಿಮಿಷದಲ್ಲಿ ಇಳಿಯ ಬೇಕಾದ ಶಿಕ್ಷಕಿಯರು ಸಾವಿನ ಮನೆಗೆ

ಅಂದಹಾಗೆ ದಾವಣಗೆರೆಯಿಂದ ಕಲಬುರ್ಗಿ ಕಡೆಗೆ ಕೆಎಸ್‌ಆರ್‌ಟಿಸಿಯ ಒಂದು ಬಸ್‌ ಸಾಗುತ್ತಿತ್ತು. ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್‌ ಯಡ್ರಾಮಿ ಕಡೆ ಹೋಗ್ತಿತ್ತು. ಯಡ್ರಾಮಿ ಕಡೆ ಹೋಗೋ ಬಸ್ಸಲ್ಲಿ ಮೂವರು ಶಿಕ್ಷಕಿಯರು ಎಂದಿನಂತೆ ಚಿಗರತಹಳ್ಳಿ ಸರ್ಕಾರಿ ಶಾಲೆಗೆ ಹೋಗ್ತಿದ್ರು. ಇನ್ನೂ 15 ನಿಮಿಷ ಬಸ್‌ ಸಾಗಿದ್ದರೇ ಶಿಕ್ಷಕಿಯರಾದ ಆಯಿಷಾ, ಸಹರಾ ಮತ್ತು ಫರೀನಾ ಬೇಗಂ ಚಿಗರಳ್ಳಿ ಕ್ರಾಸ್‌ನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೇ ವಿಧಿಯಾಟವೇ ಬೇರೆಯಾಗಿತ್ತು. ಇಳಿಯುವ ಮುನ್ನವೇ ಭೀಕರ ರಸ್ತೆ ಅಪಘಾತದಲ್ಲಿ ಸಾವಿನ ಒಡಲನ್ನು ಸೇರಿ ಬಿಟ್ಟಿದ್ದಾರೆ.

ಮೃತ ಶಿಕ್ಷಕಿಯರಿಗೆ ಕಲಬುರ್ಗಿ ಡಿಡಿಪಿಐ ಸಂತಾಪ

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಲಬುರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿ, ಶಾಂತಗೌಡ, ಶಿಕ್ಷಕಿಯರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಶಿಕ್ಷಕಿಯರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದಲ್ಲಿ ನೌಕರಿ ನೀಡುವುದಾಗಿ ತಿಳಿಸಿದರು.

ವರದಿ : ಗೋಪಾಲ ಕುಲಕರ್ಣಿ, TV5 ಕಲಬುರಗಿ

Next Story

RELATED STORIES