ಅಮ್ಮಾ ಐ ಲವ್ ಯೂ ಅಂದ ಗುರೂಗೆ ಮೆಚ್ಚುಗೆಯ ಮಹಾಪೂರ

ಸದ್ಯ ಚಿತ್ರರಂಗದಲ್ಲಿ ಎಲ್ಲೆಲ್ಲೂ ಅಮ್ಮ ಐ ಲವ್ ಯುದೇ ಚರ್ಚೆ. ಅಷ್ಟರಮಟ್ಟಿಗೆ ಸಂಚಲನ ಸೃಷ್ಟಿಸಿದೆ ಅದರ ಮ್ಯೂಸಿಕ್ ಆಲ್ಬಂ. ಸ್ಯಾಂಡಲ್ವುಡ್ನ ಮ್ಯೂಸಿಕ್ ಗುರು ಎಂದೇ ಖ್ಯಾತಿಯಾಗಿರುವ ಗುರುಕಿರಣ್ ಕಂಫೋಸ್ ಮಾಡಿರುವ ಒಂದೊಂದು ಹಾಡು ಕೂಡ ಮಾಧುರ್ಯ ಭರಿತವಾಗಿವೆ.
[story-lines]
ಬಹುಮುಖ ಪ್ರತಿಭೆ ಗುರುಕಿರಣ್ ಹವಾ ಇತ್ತೀಚಿನ ದಿನಗಳಲ್ಲಿ ಕೊಂಚ ಕಡಿಮೆ ಆಗಿತ್ತು. ಆದರೆ ದ್ವಾರಕೀಶ್ ನಿರ್ಮಾಣದ 50ನೇ ಸಿನಿಮಾ ಚೌಕ ಮೂಲಕ ಗುರುಕಿರಣ್ ಮತ್ತೆ ಚಿಗುರೊಡೆದಿದ್ದರು. ಭಿನ್ನ ಹಾಡುಗಳನ್ನು ಕೊಡೋ ಮೂಲಕ ಎಲ್ಲರ ಮನಸೂರೆಗೊಂಡಿದ್ದರು.
ಅಮ್ಮ ಮತ್ತು ಮಗನ ಅನುಬಂಧವನ್ನ ಹಾಡಿನ ಮೂಲಕ ಹೇಳಲಾಗಿದೆ. ಅಂದಹಾಗೆ ಈ ಹಾಡನ್ನು ಚೌಕ ಚಿತ್ರದಲ್ಲಿ ಅಪ್ಪ.. ಐ ಲವ್ ಯೂ ಎಂದಿದ್ದ ವಿ. ನಾಗೇಂದ್ರ ಪ್ರಸಾದ್ ಅವರೇ ಸಾಹಿತ್ಯ ಒದಗಿಸಿರೋದು ವಿಶೇಷ.
ಕೆಎಂ ಚೈತನ್ಯ ನಿರ್ದೇಶನ ದ್ವಾರಕೀಶ್ ಮತ್ತು ಪುತ್ರ ಯೋಗೀಶ್ ನಿರ್ಮಾಣದ ಅಮ್ಮ ಐ ಲವ್ ಯು ಸಿನಿಮಾ, ಹಾಡುಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದ್ರಲ್ಲೂ ಬಹುಭಾಷಾ ತಾರೆಯರು ಅಮ್ಮನೊಂದಿಗಿರೋ ಟೈಟಲ್ ಟ್ರ್ಯಾಕ್ ಎಂಥವರನ್ನೂ ಕಾಡುವಂತಿದೆ. ಅದೇನೇ ಇರಲಿ, ಗುರುಕಿರಣ್ ದ್ವಾರಕೀಶ್ ಚಿತ್ರ ಬ್ಯಾನರ್ನಿಂದ ಮತ್ತೆ ಟ್ರ್ಯಾಕ್ಗೆ ಮರಳಿರೋದು ಸಂಗೀತಪ್ರಿಯರಿಗೆ ಎಲ್ಲಿಲ್ಲದ ಖುಷಿ ತಂದಿದೆ.