Top

ಐಪಿಎಲ್​ನಲ್ಲಿ ಬೆಟ್ಟಿಂಗ್ ಒಪ್ಪಿಕೊಂಡ ಅರ್ಬಾಜ್​: 2.8 ನಷ್ಟ ಆಗಿದೆಯತೆ!

ಐಪಿಎಲ್​ನಲ್ಲಿ ಬೆಟ್ಟಿಂಗ್ ಒಪ್ಪಿಕೊಂಡ ಅರ್ಬಾಜ್​: 2.8 ನಷ್ಟ ಆಗಿದೆಯತೆ!
X

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸೋದರ ಹಾಗೂ ನಟ, ನಿರ್ಮಾಪಕ ಅರ್ಬಾಜ್ ಖಾನ್ ಐಪಿಎಲ್ ನಲ್ಲಿ ಬೆಟ್ಟಿಂಗ್ ಹೂಡಿದ್ದನ್ನು ಒಪ್ಪಿಕೊಂಡಿದ್ದು, ಬುಕ್ಕಿ ಸಂಪರ್ಕ ಹೊಂದಿದ್ದು ನಿಜ. ಬೆಟ್ಟಿಂಗ್​ನಲ್ಲಿ 2.8 ಕೋಟಿ ರೂ. ನಷ್ಟ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

[story-lines]

ಮಹಾರಾಷ್ಟ್ರದ ಥಾಣೆ ಪೊಲೀಸರ ಮುಂದೆ ಶನಿವಾರ ಹಾಜರಾದ ಅರ್ಬಾಜ್ ಖಾನ್​, ವಿಚಾರಣೆ ವೇಳೆ ಕಳೆದ 6 ವರ್ಷಗಳಿಂದ ಐಪಿಎಲ್​ನಲ್ಲಿ ಬೆಟ್ಟಿಂಗ್​ನಲ್ಲಿ ಹಣ ಹೂಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.

ಸೋನು ಜಾಲನ್ ಎಂಬ ಬುಕ್ಕಿಯೊಂದಿಗೆ ತಾನು ಸಂಪರ್ಕ ಹೊಂದಿದ್ದು, 2.8 ಕೋಟಿ ರೂ. ಕಳೆದುಕೊಂಡಿದ್ದೇನೆ. ಆತನಿಗೆ ಇನ್ನೂ ಹಣ ನೀಡಿಲ್ಲ. ಹಣ ನೀಡುವಂತೆ ಬುಕ್ಕಿ ತಮಗೆ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ಅರ್ಬಾಜ್ ಖಾನ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ.

ಥಾಣೆ ಪೊಲೀಸರು 50 ವರ್ಷದ ಅರ್ಬಾಜ್ ಖಾನ್​ಗೆ ನೋಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಿದ್ದರು. ನೋಟಿಸ್ ಅನ್ವಯ ಠಾಣೆಗೆ ಆಗಮಿಸಿದ ಅರ್ಬಾಜ್​, ಸೋನು ಜೊತೆ ಮುಖಾಮುಖಿ ಭೇಟಿ ಮಾಡಿದ್ದೂ ಅಲ್ಲದೇ ಪೊಲೀಸರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಸೋನು 2008ರಲ್ಲಿ ಸಿಕ್ಕಿಬಿದ್ದಿದ್ದ. ನಂತರ ಜಾಮೀನಿನ ಮೇಲೆ ಬಿಡುಗಡೆ ಆದ ಮೇಲೂ ಈ ದಂಧೆಯನ್ನು ಮುಂದುವರಿಸಿದ್ದ. ಅಲ್ಲದೇ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿರುವ ಬಗ್ಗೆಯೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Next Story

RELATED STORIES