Top

ಶತಕದ ಸಂಭ್ರಮದಲ್ಲಿ ಟಗರು ಸಿನಿಮಾ

ಶತಕದ ಸಂಭ್ರಮದಲ್ಲಿ ಟಗರು ಸಿನಿಮಾ
X

[story-lines]ಟಗರು ಸ್ಯಾಂಡಲ್‌ ವುಡ್‌ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಸಿನಿಮಾ.. ಚಿತ್ರದ ಅದ್ಧೂರಿ ಮೇಕಿಂಗ್, ಖಡಕ್ ಸ್ಟೋರಿ, ಚರಣ್ ರಾಜ್‌ ರ ವಂಡರ್‌ ಫುಲ್ ಮ್ಯೂಸಿಕ್, ಜೊತೆಗೆ ಸೂರಿ ಕಟ್ಟಿಕೊಟ್ಟಿದ್ದ ಪಾತ್ರಗಳಿಗೆ ಸಿನಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ರು.. ಇದೀಗ ಟಗರು ಸಿನಿಮಾ 100 ಡೇಸ್ ಕಂಪ್ಲೀಟ್ ಮಾಡಿದ್ದು, ಇಡೀ ಚಿತ್ರತಂಡ ಸಕ್ಸಸ್ ಖುಷಿಯಲ್ಲಿದೆ.

ಟಗರು ಸಿನಿಮಾ ಶುರುವಿನಿಂದ , 100 ಡೇಸ್​ ಆಗುವವರೆಗೂ ಅದರ ಕ್ರೇಜ್​ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ..ಟಗರು ಸುಮಾರು 300 ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ರಿಲೀಸ್ ಆಗಿದ್ದು, ಇದೀಗ ಮಲ್ಟಿಪ್ಲೆಕ್ಸ್​ ಸೇರಿದಂತೆ ಸುಮಾರು 15 ಥಿಯೇಟರ್​ಗಳಲ್ಲಿ100 ಡೇಸ್ ಕಂಪ್ಲೀಟ್ ಮಾಡಿದೆ. ಇನ್ನು ಚಿತ್ರತಂಡ ಟಗರು ಚಿತ್ರದ ಸಕ್ಸಸ್​ ಕಾರ್ಯಕ್ರಮವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡೋ ಪ್ಲಾನ್​ನಲ್ಲಿದ್ದು ಇದೇ ತಿಂಗಳ 23ರಂದು ನಗರದ ಪ್ಯಾಲೇಸ್​ ಗ್ರೌಂಡ್​ನಲ್ಲಿ ನಡೆಯಲಿದೆ.

ಟಗರು ಸಿನಿಮಾ 100 ಡೇಸ್ ಕಾರ್ಯಕ್ರಮದ ದಿನವೇ ಸೂರಿ ಮತ್ತು ಧನಂಜಯ್​ ಕಾಂಬಿನೇಷನ್​ನ ಹೊಸ ಚಿತ್ರ ಸೆಟ್ಟೇರಲಿದ್ದು, ಈಗಾಗ್ಲೇ ಪಾಪ್​ಕಾರ್ನ್​ ಮಂಕಿ ಟೈಗರ್ ಅಂತ ಟೈಟಲ್​ ಫಿಕ್ಸ್​ ಆಗಿದೆ..ಅಂದ್ಹಾಗೇ ಈ ಚಿತ್ರಕ್ಕೂ ಟಗರು ಚಿತ್ರ ನಿರ್ಮಾಪಕ ಕೆ.ಪಿ. ಶ್ರೀಕಾಂತ್​ ಬಂಡವಾಳ ಹಾಕ್ತಿದ್ದಾರೆ.

Next Story

RELATED STORIES