Top

ಆಕರ್ಷಿಸುತ್ತಿರುವ ಟಗರು ಪುಟ್ಟಿಯ ಚಿತ್ತಾರಗಳು!

ಆಕರ್ಷಿಸುತ್ತಿರುವ ಟಗರು ಪುಟ್ಟಿಯ ಚಿತ್ತಾರಗಳು!
X

[story-lines]ಸ್ಯಾಂಡಲ್​ವುಡ್​ನ ನಟ-ನಟಿಯರು ಕೇವಲ ನಟನೆಗೆ ಮಾತ್ರ ಸೀಮಿತವಾಗಿಲ್ಲ.. ಅವರಲ್ಲಿ ನಮಗೆ ಗೊತ್ತಿರದ ಹಿಡನ್​ ಟ್ಯಾಲೆಂಟ್​ಗಳು ಕೂಡ ಇರುತ್ತವೆ.. ಉದಾಹರಣೆಗೆ ಪುನೀತ್​ ರಾಜ್​ಕುಮಾರ್​ ಅವರಿಗೆ ನಟನೆಯ ಜೊತೆಗೆ ಹಾಡುವುದು ಕೂಡ ಒಂದು ಟ್ಯಾಲೆಂಟ್.. ಇನ್ನೂ ಕೆಲವರು ಪೇಟಿಂಗ್​, ಡ್ರಾಯಿಂಗ್​ ಹೀಗೆ ಹಲಾವರು ಹವ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ..

ಈ ರೀತಿ ಹವ್ಯಾಸ ಹೊಂದಿರುವವರ ಸಾಲಿಗೆ ಕೆಂಡಸಂಪಿಗೆ ಬ್ಯೂಟಿ ಮಾನ್ವಿತಾ ಹರೀಶ್​ ಕೂಡ ಸೇರಿಕೊಂಡಿದ್ದಾರೆ.. ಇತ್ತೀಚೆಗಷ್ಟೆ ಈ ಬೆಡಗಿ ವರನಟ ರಾಜ್​ಕುಮಾರ್​, ಸೌತ್​ ಸೂಪರ್ ಸ್ಟಾರ್​ ರಜಿನಿಕಾಂತ್​ ಅವರ ಚಿತ್ರ ಬಿಡಿಸಿದ್ದರು.. ಇದೀಗ ಮತ್ತೊಂದು ಚಿತ್ತಾರವನ್ನು ಬಿಡಿಸಿ ತಮ್ಮ ಟ್ಯಾಲೆಂಟ್ ಪ್ರದರ್ಶಿಸಿದ್ದಾರೆ..

ಸುಕ್ಕಾ ಸೂರಿ ನಿರ್ದೇಶನದ ತಮ್ಮ ಹೊಸ ಚಿತ್ರದ ಟೈಟಲ್​ ಅನೌನ್ಸ್​ ಮಾಡಿದ್ದರು.. ಪಾಪ್​ಕಾರ್ನ್​ ಮಂಕಿ ಟೈಗರ್​, ಈ ಟೈಟಲ್​​ಗೆ ಸೂಕ್ತವಾಗುವಂತೆ ನಟಿ ಮಾನ್ವಿತಾ ಹರೀಶ್​ ಚಿತ್ರವೊಂದನ್ನ ಬಿಡಿಸಿದ್ದಾರೆ.. ಇದು ಕೇವಲ ಚಿತ್ರ ಮಾತ್ರವಲ್ಲದೆ ಆರ್ಟ್​ ವರ್ಕ್​ ಆಗಿದ್ದು ಒಂದು ರೀತಿಯ ವಾಲ್​ ಹ್ಯಾಂಗಿಂಗ್​ ಆಗಿಯೂ ಕೂಡ ಬಳಸಬಹುದಾಗಿದೆ..

ಮಾನ್ವಿತಾ ಮಾಡಿರುವ ಆರ್ಟ್​ ವರ್ಕ್​ ನೋಡಿ ನಿರ್ದೇಶಕ ಸೂರಿ ತಮ್ಮ ಚಿತ್ರ ಪಾಪ್​ಕಾರ್ನ್​ ಮಂಕಿ ಟೈಗರ್​ಗೆ ಈ ಡ್ರಾಯಿಂಗ್​ ಬಳಸುತ್ತಾರಾ ಕಾದು ನೋಡಬೇಕು..

Next Story

RELATED STORIES