Top

ಬಾಲಿವುಡ್​ಗೆ ಹಾರಿದ ಸೌತ್​ನ ಮತ್ತೊಬ್ಬ ನಟಿ!

ಬಾಲಿವುಡ್​ಗೆ ಹಾರಿದ ಸೌತ್​ನ ಮತ್ತೊಬ್ಬ ನಟಿ!
X

[story-lines]ಶಿವಲಿಂಗ ಚಿತ್ರದ ಮೂಲಕ ಪ್ರೇಕ್ಷಕರನ್ನ ಹೆದರಿಸಿದ್ದ ನಟಿ ವೇದಿಕಾ ತಮ್ಮ ಸಿನಿ ಕರಿಯರ್​ನಲ್ಲಿ ಒಂದು ದೊಡ್ಡ ಮೆಟ್ಟಿಲನ್ನ ಹತ್ತಿದ್ದಾರೆ.. ಸೌತ್​ನಲ್ಲಿ ಕಮಾಲ್​ ಮಾಡಿದ್ದ ಈ ನಟಿ ಇದೀಗ ಬಾಲಿವುಡ್​ಗೆ ಹಾರಲಿದ್ದಾರೆ.. . ಕನ್ನಡ, ತಮಿಳು, ತೆಲುಗು, ಮಲೆಯಾಳಂ ಸಿನಿಮಾಗಳನ್ನು ಮಾಡಿದ್ದ ವೇದಿಕಾ ಈಗ ಹಿಂದಿ ಸಿನಿಮಾ ಮಾಡಲು ಮುಂದಾಗಿದ್ದಾರೆ..

ಅಂದಹಾಗೆ, ಹಿಂದಿಯಲ್ಲಿ ತಮ್ಮ ಮೊದಲ ಚಿತ್ರದಲ್ಲಿಯೇ ನಟ ಇಮ್ರಾನ್​ ಹಶ್ಮಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.. ದೃಶ್ಯಂ ಚಿತ್ರದ ನಿರ್ದೇಶಕ ಜೀತು ಜೋಸೆಫ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ..

ಕನ್ನಡದಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್​ ಜೊತೆ ಸಂಗಮ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟು, ಶಿವಣ್ಣನ ಜೊತೆ ಶಿವಲಿಂಗ ಸಿನಿಮಾ ಅಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ರು.. ಇದೀಗ ಹೋಮ್​ ಮಿನಿಸ್ಟರ್​ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.. ಈ ಸಿನಿಮಾ ಮುಗಿದ ನಂತರ ಬಾಲಿವುಡ್​ನಲ್ಲಿ ಸಿನಿಮಾ ಮಾಡಲಿದ್ದಾರೆ..

Next Story

RELATED STORIES