Top

ಐಪಿಎಲ್ ಬೆಟ್ಟಿಂಗ್‌ನಲ್ಲಿ ನಟ ಅರ್ಬಾಜ್ ಖಾನ್ ಸಮನ್ಸ್ ಜಾರಿ

ಐಪಿಎಲ್ ಬೆಟ್ಟಿಂಗ್‌ನಲ್ಲಿ ನಟ ಅರ್ಬಾಜ್ ಖಾನ್ ಸಮನ್ಸ್ ಜಾರಿ
X

[story-lines]

ನವದೆಹಲಿ : ದಿನದಿಂದ ದಿನಕ್ಕೆ ಚಿನಕುರುಳಿ ಕ್ರಿಕೆಟ್ ಎಂದೇ ಪ್ರಸಿದ್ದ ಆಗಿರುವ ಐಪಿಎಲ್ ಬೆಟ್ಟಿಂಗ್‌ ಜಾಲ ಕದಂಬ ಬಾಹುವಿನಂತೆ ಹರಡುತ್ತಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂನಿಂದ ಹೊರ ಬಿದ್ದ ಜಾಲದ ಮಾಹಿತಿ, ಅವರ ಬಂಟರಿಂದ ಅಲ್ಲಲ್ಲಿ ಚಿಗುರೊಡೆದು ಮುಂದೆ ಸಾಗುತ್ತಿದೆ.

ಇದೀಗ ಈಗ ಮತ್ತೆ ಪ್ರಕರಣ ಬುಕ್ಕಿಂಗ್ ಆರೋಪಿ ಸೋನು ಮೂಲಕ ಹೊರಬಿದ್ದಿದೆ. ಭೂಗತ ಪಾತಕಿ ದಾವೂದ್ ಬಂಟ ನಟ ಅರ್ಬಾಜ್ ಖಾನ್ ಮೇಲೆ ಬೆಟ್ಟಿಂಗ್ ನಂಟನ್ನು ಬಿಚ್ಚಿಟ್ಟಿದ್ದಾನೆ. ಈ ಮೂಲಕ ನಟ ಅರ್ಬಾಜ್ ಖಾನ್‌ ಬೆಟ್ಟಿಂಗ್‌ನಲ್ಲಿ ಪಾತ್ರ ವಹಿಸಿರುವ ಮಾಹಿತಿಯನ್ನು ನೀಡಿದ್ದಾರೆ. ಈ ಮೂಲಕ ಪ್ರಕರಣ ಮತ್ತೆ ಹೊಸದೊಂದು ತಿರುವನ್ನು ಪಡೆದುಕೊಂಡಿದೆ.

ಈ ಹಿನ್ನಲೆಯಲ್ಲಿ ಮುಂಬೈನ ಥಾಣೆ ಪೊಲೀಸರು, ಬುಕ್ಕಿ ಸೋನು ಬಿಚ್ಚಿಟ್ಟ ಮಾಹಿತಿ ಅನುಸಾರ, ನಟ ಅರ್ಬಾಜ್ ಖಾನ್‌ಗೆ ಸಮನ್ಸ್ ಜಾರಿ ಮಾಡಿದೆ. ಅಲ್ಲದೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆಯಂತೆ. ಹೀಗಾಗಿ ಐಪಿಎಲ್ ಬೆಟ್ಟಿಂಗ್‌ನಲ್ಲಿ ನಟ ನಟ ಅರ್ಬಾಜ್ ಖಾನ್ ಬಾಗಿಯಾಗಿದ್ದಾರಾ ಎಂಬ ಶಂಕೆಯನ್ನು ಮೂಡಿಸಿದೆ. ಈ ಪ್ರಕರಣ ಎಲ್ಲಿಗೆ ಕೊಂಡೊಂಯ್ದು ಮುಟ್ಟುತ್ತದೋ ಕಾದು ನೋಡಬೇಕಿದೆ.

Next Story

RELATED STORIES