ಯುವಕನ ಮೇಲೆ ಮಾರಣಾಂತಿಕ ಹಲ್ಲೆ

[story-lines]
ಬೆಂಗಳೂರು:ಕೆ.ಆರ್ ಪುರಂನಲ್ಲಿ ಮತ್ತೆ ಲಾಂಗು, ಮಚ್ಚುಗಳು ಸದ್ದು ಮಾಡಿದ್ದು, ಯುವಕನೋರ್ವನನ್ನು ಕಿಡ್ಯ್ನಾಪ್ ಮಾಡಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೆ.ಆರ್ ಪುರಂ ನ ಕಲ್ಕೆರೆಯಲ್ಲಿ ಕಳೆದ 24 ರಂದು ನಡೆದ ಘಟನೆ ನಡೆದಿದ್ದು, ಪವನ್ ಅಲಿಯಾಸ್ ಕೆಂಚ (23) ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಚಿದಂಬರ ಅಲಿಯಾಸ್ ಚಿದು, ರೌಡಿ ಶೀಟರ್ ವೋಟೆ ರವಿ, ಸುಮನ್, ಕಾರ್ತಿಕ್ ಸೇರಿಂತೆ 12 ದುಷ್ಕರ್ಮಿಗಳು ಪವನ್ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಗುರುವಾರ ಸಂಜೆ 4:30 ಕ್ಕೆ ಕಲ್ಕೆರೆ ಯಿಂದ ಆಟೋದಲ್ಲಿ ಕಿಡ್ನ್ಯಾಪ್ ಮಾಡಿದ ಕಿರಾತಕರು ಕಾಡ ಅಗ್ರಹಾರಕ್ಕೆ ಹೊತ್ತೊಯ್ದು ಮನಸೋ ಇಚ್ಚೆ ಹಲ್ಲೆ ಮಾಡಿ ನಂತರ ಕಲ್ಕೆರೆ ಕೆರೆಯ ಬಳಿ ತಂದು ಎಸೆದು ಹೋಗಿದ್ದಾರೆ. ಘಟನೆಯಲ್ಲಿ ಪವನ್ ತಲೆ ಬುರುಡೆ, ಎದೆಯ ಭಾಗ, ಕೈಕಾಲುಗಳನ್ನು ಮಚ್ಚಿನಿಂದ ಸೀಳಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.