ಹಣ ವರ್ಗಾವಣೆ ಪ್ರಕರಣ: ಬಿಸಿಸಿಐಗೆ 121 ಕೋಟಿ ರೂ.ದಂಡ

X
TV5 Kannada1 Jun 2018 5:55 AM GMT
[story-lines]
ಮುಂಬೈ:2009ರ ಐಪಿಎಲ್ ಆವೃತ್ತಿಯಲ್ಲಿ ಎಫ್ಇಎಂಎ ಕಾನೂನು ಉಲ್ಲಂಘಿಸಿದಕ್ಕಾಗಿ ಜಾರಿ ನಿರ್ದೇಶನಾಲಯ ಬಿಸಿಸಿಐಗೆ 121 ಕೋಟಿ ರೂಪಾಯಿ ದಂಡ ವಿಧಿಸಿದೆ. 2009 ಐಪಿಎಲ್ ಟೂರ್ನಿ ವೇಳೆ ಬಿಸಿಸಿಯ ಅಧ್ಯಕ್ಷರಾಗಿದ್ದ ಎನ್.ಶ್ರೀನಿವಾಸನ್ ಮತ್ತು ಐಪಿಎಲ್ ಕಮೀಶನರ್ ಲಲಿತ್ ಮೋದಿ ಎಫ್ಇಎಂಎ ಕಾನೂನನ್ನ ಉಲ್ಲಂಘಿಸಿದ್ದರು. 2009ರಲ್ಲಿ ಎರಡನೇ ಆವೃತ್ತಿಯ ಐಪಿಎಲ್ ಲೀಗ್ನ್ನ ದಕ್ಷಿಣ ಆಫ್ರಿಕಾದಲ್ಲಿ ನಡೆಸುವುದಕ್ಕಾಗಿ ಎನ್.ಶ್ರೀನಿವಾಸನ್ 243 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದರು.
Next Story