Top

ಚಾಂಪಿಯನ್ಸ್ ಟ್ರೋಫಿ: ತಂಡದಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ ಸುನೀಲ್​

ಚಾಂಪಿಯನ್ಸ್ ಟ್ರೋಫಿ: ತಂಡದಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ ಸುನೀಲ್​
X

ನವದೆಹಲಿ: ಮುಂಬರುವ ಚಾಂಪಿಯನ್ಸ್ ಟ್ರೋಫಿ ಹಾಕಿ ಲೀಗ್​ಗೆ 18 ಆಟಗಾರರನೊಳ್ಳಗೊಂಡ ಪುರುಷರ ಹಾಕಿ ತಂಡ ಪ್ರಕಟಿಸಲಾಗಿದ್ದು, ಎಸ್​.ವಿ. ಸುನೀಲ್ ಸ್ಥಾನ ಪಡೆದ ಏಕೈಕ ಕನ್ನಡಿಗರಾಗಿದ್ದಾರೆ.

ಮುಂದಿನ ತಿಂಗಳು ಜೂನ್​ 23ರಂದು ಹಾಲೆಂಡ್​ನಲ್ಲಿ ಆರಂಭವಾಗಲಿರುವ ಟೂರ್ನಿಯಲ್ಲಿ ಭಾರತ ತಂಡವನ್ನ ಗೋಲ್​ ಕೀಪರ್​ ಪಿ.ಆರ್​. ಶ್ರೀಜೇಶ್​ ಮುನ್ನಡೆಸಲಿದ್ದಾರೆ.

ಭಾರತ ಹಾಕಿ ತಂಡ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಹಿಂದಿನ ಆವೃತ್ತಿಯಲ್ಲಿ ಪಿ.ಆರ್​.ಶ್ರೀಜೇಶ್​ ನೇತೃತ್ವದಲ್ಲಿ ಭಾರತ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿತ್ತು.

ಭಾರತ ತಂಡ:

  • ಗೋಲ್​ಕೀಪರ್​: ಪಿ.ಆರ್​. ಶ್ರೀಜೇಶ್​, ಕೃಷ್ಣನ್​ ಬಹದ್ದೂರ್​ ಪಠಾಕ್​.

    ರಕ್ಷಣೆ: ಹರ್ಮನ್​ಪ್ರೀತ್​ ಸಿಂಗ್​, ವರುಣ್​ ಕುಮಾರ್​, ಸುರೇಂದರ್​ ಕುಮಾರ್​, ಹರ್ಮನ್​ಪ್ರೀತ್​ ಸಿಂಗ್​, ಬೀರೇಂದ್ರಾ ಲಾಕ್ರಾ, ಅಮಿತ್​ ರೊಹಿದಾಸ್​

    ಸಂಪರ್ಕ: ಮನ್​ಪ್ರೀತ್ ಸಿಂಗ್​, ಚಿಂಗ್ಲೆಸಾನಾ ಸಿಂಗ್​ ಕಾಂಗುಜಾಮ್​ (ಉಪನಾಯ), ಸರ್ದಾರ್​ ಸಿಂಗ್​ , ವಿವೇಕ್​ ಸಾಗರ್​ ಪ್ರಸಾದ್​

    ಮುನ್ಪಡೆ: ಎಸ್​.ವಿ. ಸುನೀಲ್​, ರಮಣ್​ದೀಪ್​ ಸಿಂಗ್​, ಮಂದೀಪ್​ ಸಿಂಗ್​, ಸುಮೀತ್​ ಕುಮಾರ್​, ಆಕಾಶ್​ದೀಪ್​ ಸಿಂಗ್​, ದಿಲ್​ಪ್ರೀತ್​ ಸಿಂಗ್​

Next Story

RELATED STORIES