Top

ರಿವೀಲ್ ಆಯ್ತು ರುಸ್ತುಂ ಚಿತ್ರದ ಫೋಟೋ

ರಿವೀಲ್ ಆಯ್ತು ರುಸ್ತುಂ ಚಿತ್ರದ ಫೋಟೋ
X

ಟಗರು ಸಿನಿಮಾ ತೆರೆ ಕಾಣುತಿದ್ದಂತೆ ಕರುನಾಡ ಚಕ್ರವರ್ತಿ ಕೈಯಲ್ಲಿ ಇನ್ನು ಶೂಟಿಂಗ್​ ಹಂತದಲ್ಲಿ ಇರುವ ಸಿನಿಮಾಗಳು ಬಹಳಷ್ಟು ಇವೆ.. ಇಂತಹ ಸಿನಿಮಾಗಳ ಲೀಸ್ಟ್​ನಲ್ಲಿ ಸಾಹಸ ನಿರ್ದೇಶಕ ರವಿ ವರ್ಮಾ ನಿರ್ದೇಶನದ ರುಸ್ತುಂ ಚಿತ್ರ ಕೂಡ ಒಂದು.. ಈ ಚಿತ್ರದಲ್ಲಿ ಶಿವಣ್ಣ ಒಬ್ಬ ಪೋಲಿಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರೊ ವಿಷಯ ಗೊತ್ತೆಯಿದೆ..

ಇನ್ನು ಶಿವಣ್ಣನಿಗೆ ಜೋಡಿಯಾಗಿ ಯೂ-ಟರ್ನ್​ ಬೆಡಗಿ ಶ್ರದ್ಧಾ ಶ್ರೀನಾಥ್​ ಅಭಿನಯಿಸುತ್ತಿದ್ದಾರೆ.. ಚಿತ್ರದ ಶೂಟಿಂಗ್​ ಭರದಿಂದ ಸಾಗಿದ್ದು, ಚಿತ್ರತಂಡ ಶಿವಣ್ಣ ಪೋಲಿಸ್​ ಗೆಟಪ್​ನಲ್ಲಿ ಇರುವ ಒಂದು ಫೋಟೋವೊಂದುನ್ನು ಬಿಡುಗಡೆ ಮಾಡಿದೆ.. ಈ ಫೋಟೋದಲ್ಲಿ ಶಿವಣ್ಣನ ಜೊತೆ ನಟಿ ಶ್ರದ್ಧಾ ಶ್ರೀನಾಥ್​, ಹಾಗೂ ಚಿತ್ರತಂಡದ ಇನ್ನಿತರೇ ಸದಸ್ಯರೂ ಕೂಡ ಇದ್ದಾರೆ..

ಎಲ್ಲವು ಅಂದುಕೊಂಡಂತೆ ಆದರೆ ರುಸ್ತುಂ ಚಿತ್ರ ಇದೇ ವರ್ಷ ಸೆಪ್ಟೆಂಬರ್​ ವೇಳೆಗೆ ರಿಲೀಸ್​ ಆಗುವ ಸಾಧ್ಯತೆ ಕೂಡ ಇದೆ.. ರುಸ್ತುಂ ಚಿತ್ರದ ಜೊತೆಗೆ ಶಿವಣ್ಣ ಅಭಿನಯಿಸುತ್ತಿರುವ ಕವಚ, ದಿ ವಿಲನ್ ಸಿನಿಮಾ ಕೂಡ ಶೂಟಿಂಗ್​ ಹಂತದಲ್ಲಿದ್ದು ಈ ಚತ್ರಳೂ ಕೂಡ ಯಾವಾಗ ಬಿಡುಗಡೆ ಆಗುತ್ತೊ ಕಾದು ನೋಡಬೇಕು..

Next Story

RELATED STORIES