ಡಾ. ಪಾರ್ವತಮ್ಮನವರ ಮೊದಲ ಪುಣ್ಯಸ್ಮರಣೆ

[story-lines]
ಸ್ಯಾಂಡಲ್ವುಡ್ನ ಹೆಸರಾಂತ ನಿರ್ಮಾಪಕಿ , ಚಂದನವನದ ನಂದಾದೀಪ ಪಾರ್ವತಮ್ಮ ರಾಜ್ಕುಮಾರ್ ನಿಧನರಾಗಿ ಇಂದಿಗೆ ಒಂದು ವರ್ಷ. ಪಾರ್ವತಮ್ಮನವ್ರು ದೈಹಿಕವಾಗಿ ಇಹಲೋಕವನ್ನ ತ್ಯಜಿಸಿದ್ರೂ, ಇಂದಿಗೂ ಅವರ ನೆನಪು ಮಾತ್ರ ಅಜರಾಮರ.
ಇಂದು ದೊಡ್ಮನೆಯವ್ರು ಕುಟುಂಬ ಸಮೇತರಾಗಿ ಕಂಠೀರವ ಸ್ಟುಡಿಯೋಗೇ ಆಗಮಿಸಿ, ಪಾರ್ವತಮ್ಮನವ್ರ ಸಮಾಧಿಗೆ ಪೂಜೆ ಸಲ್ಲಿಸಿದ್ರು..ಪುತ್ರರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ , ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣಾ ಕಾರ್ಯದಲ್ಲಿ ಭಾಗವಹಿಸಿದ್ರು.ಇದೇ ಸಂದರ್ಭದಲ್ಲಿ ಪಾರ್ವತಮ್ಮನವರ ಅಭಿಮಾನಿ ಬರಹಗಾರರೊಬ್ಬರು ಬರೆದ ದೊಡ್ಮನೆ ಅಮ್ಮ ಹೆಸರಿನ ಪುಸ್ತಕವನ್ನ ಬಿಡುಗಡೆ ಮಾಡಲಾಯ್ತು..ಹಾಗೂ ಡಾ.ರಾಜ್ ಅಭಿನಯದ ಕೆರಳಿದ ಸಿಂಹ ಚಿತ್ರದ ಅಮ್ಮ ನೀನು ನಮಗಾಗಿ ಹಾಡನ್ನ ಮೂವರು ಮಕ್ಕಳು ರಿಮಿಕ್ಸ್ ವರ್ಷನ್ನಲ್ಲಿ ಹಾಡಿದ್ದು, ಆ ಹಾಡನ್ನ ಕೂಡ ಇಂದು ರಿಲೀಸ್ ಮಾಡಲಾಯ್ತು.
ಇನ್ನು ಪಾವರ್ತಮ್ಮನವ್ರ ಪುಣ್ಯಸ್ಮರಣೆಗೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದು, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಹಿರಿಯ ನಟಿ ಸರಿತಾ, ಹಿರಿಯ ನಟ ದೊಡ್ಡಣ್ಣ ಕೂಡ ಸಮಾಧಿಗೆ ಪೂಜೆ ಸಲ್ಲಿಸಿದ್ರು..ಇದೇ ಸಂದರ್ಭದಲ್ಲಿ ಮಾತನಾಡಿದ ರಾಕ್ಲೈನ್ ವೆಂಕಟೇಶ್ ಮತ್ತು ನಟಿ ಸರಿತಾ ಪಾರ್ವತಮ್ಮನವ್ರನ್ನ ನೆನೆದು ಭಾವುಕರಾದ್ರು.
ಒಟ್ನಲ್ಲಿಸಾಧನೆಯ ಶಿಖರವನ್ನು ಏರಿದ ಪಾರ್ವತಮ್ಮ ರಾಜ್ಕುಮಾರ್, ಇಹಲೋಕ ತ್ಯಜಿಸಿ ಒಂದು ವರ್ಷ. ಆದ್ರೆ ಅಮ್ಮನ ನೆನಪಿನಲ್ಲೆ ದೊಡ್ಮನೆ ಉಸಿರಾಡುತ್ತಿದ್ದು, ಕನ್ನಡ ಚಿತ್ರರಂಗಕ್ಕೆ ಮಹಾನ್ ಚೇತನ ಪಾರ್ವತಮ್ಮನವ್ರು ಕೊಟ್ಟ ಕೊಡುಗೆಯನ್ನ ಮರೆಯುವಂತಿಲ್ಲ.