Top

ರಾಜರಾಜೇಶ್ವರಿ ಕುರುಕ್ಷೇತ್ರದಲ್ಲಿ `ಮುನಿ'ಗೆ ಒಲಿದ ಗೆಲುವಿನ `ರತ್ನ'

ರಾಜರಾಜೇಶ್ವರಿ ಕುರುಕ್ಷೇತ್ರದಲ್ಲಿ `ಮುನಿಗೆ ಒಲಿದ ಗೆಲುವಿನ `ರತ್ನ
X

[story-lines]

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದುಕೊಂಡಿದೆ. ಮತದಾರರ ಗುರುತು ಚೀಟಿ ಮತ್ತೆ ಮತದಾರರ ಓಲೈಕೆಗೆ ಆಮೀಷ ಸೇರಿದಂತೆ ನಾನಾ ಕಾರಣಗಳಿಗೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಿತ್ತು.

ಮೇ 28ರಂದು ನಡೆದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಭಾರೀ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ಬಂದ ಮುನಿರತ್ನ 25,492 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಮುನಿರತ್ನ 1,08,064 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ, 82,572 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಕುಸಿದರೆ, ಜೆಡಿಎಸ್​ ಅಭ್ಯರ್ಥಿ ಸಿ.ಎಚ್​.ರಾಮಚಂದ್ರ 60360 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಡೆಯಿತು.

Next Story

RELATED STORIES