Top

ಮುಗೀತು ಕೆಜಿಎಫ್ ತಪಸ್ಸು: ಯಶ್​​​ ಗಡ್ಡಕ್ಕೆ ಬೀಳುತ್ತಾ ಕತ್ತರಿ..?

ಮುಗೀತು ಕೆಜಿಎಫ್ ತಪಸ್ಸು: ಯಶ್​​​ ಗಡ್ಡಕ್ಕೆ ಬೀಳುತ್ತಾ ಕತ್ತರಿ..?
X

[story-lines]

ಉಗ್ರಂ ಫೇಮ್ ಪ್ರಶಾಂತ್- ರಾಕಿಂಗ್ ಸ್ಟಾರ್ ಯಶ್ ಕ್ರೇಜಿ ಕಾಂಬಿನೇಷನ್​​ ಸಿನಿಮಾ ಕೆಜಿಎಫ್. ಈ ಚಿತ್ರದ ಪಾತ್ರಕ್ಕಾಗಿ ಯಶ್ ಸಿಕ್ಕಾಪಟ್ಟೆ ರಿಸ್ಕ್​ ತಗೊಂಡಿದ್ದಾರೆ. ಕೆಜಿಎಫ್ ಮುಗಿಯೋವರೆಗೂ ಮತ್ಯಾವುದೇ ಪ್ರಾಜೆಕ್ಟ್​ಗೆ ಕಮೀಟ್ ಆಗದೇ ಸದಾ ಕೆಜಿಎಫ್ ಜಪ ಮಾಡ್ತಾ ಬರ್ತಿದ್ದಾರೆ. ಕೆಜಿಎಫ್ ಚಿತ್ರಕ್ಕಾಗಿ ಒಂದೂವರೆ ವರ್ಷದಿಂದ ಗಡ್ಡ ಮೀಸೆಗೆ ಕತ್ತರಿ ಹಾಕಿಲ್ಲ ಯಶ್. ಅವ್ರ ದಟ್ಟವಾದ ಗಡ್ಡ ಮೀಸೆ ಕೆಲ ಅಭಿಮಾನಿಗಳಿಗೆ ಮತ್ತು ಪತ್ನಿ ರಾಧಿಕಾಗೂ ಇಷ್ಟವಾಗಿರಲಿಲ್ಲ. ಈ ಅವತಾರದಲ್ಲಿ ಯಶ್​ ಅವ್ರನ್ನ ನೋಡಿ ಅಂಬರೀಷ್ ಕೂಡ ಬೇಸರ ವ್ಯಕ್ತಪಡಿಸಿದ್ರು. ಯಾರು ಏನೇ ಅಂದ್ರು, ಕೆಜಿಎಫ್ ಚಿತ್ರಕ್ಕಾಗಿ ಯಶ್​ ಗಡ್ಡಕ್ಕೆ ಕತ್ತರಿ ಹಾಕುವ ಗೋಜಿಗೆ ಹೋಗಿರಲಿಲ್ಲ.

ಇತ್ತೀಚೆಗೆ ಚೆನ್ನೈನಲ್ಲಿ ಕಾಳಿ ಮಾತೆಯ ಆಲಯದ ರೀತಿ ಪಕ್ಕಾ ರಾ ಸೆಟ್ ಹಾಕಿ ಕೆಜಿಎಫ್​ ಚಿತ್ರದ ಫೈನಲ್ ಶೆಡ್ಯೂಲ್​ ಶೂಟಿಂಗ್ ಕಂಪ್ಲೀಟ್ ಮಾಡಿದೆ ಚಿತ್ರತಂಡ. ಅದ್ರ ಎಕ್ಸ್​​ಕ್ಲೂಸಿವ್ ಸ್ಟಿಲ್ಸ್​​ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ. ಸದ್ಯ ಕೆಜಿಎಫ್​​ ಚಿತ್ರದ ಡಬ್ಬಿಂಗ್ ವರ್ಕ್ ಶುರುವಾಗಿದ್ದು, ಮೂರು ವಾರಗಳ ಕಾಲ ಡಬ್ಬಿಂಗ್ ನಡೆಯಲಿದೆ. ಡಬ್ಬಿಂಗ್ ಮುಗಿದ ನಂತ್ರ ಚಿತ್ರದ ಪ್ರಮೋಷನ್ ಶುರುವಾಗಲಿದೆ.

ಅಂತೂ ಕೆಜಿಎಫ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಯಶ್ ಗಡ್ಡ ತೆಗೆದು ಮತ್ತೆ ಸ್ಮಾರ್ಟ್​​ ಲುಕ್​ನಲ್ಲಿ ಶೀಘ್ರದಲ್ಲೇ ದರ್ಶನ ಕೊಡಲಿದ್ದಾರೆ. ಇನ್ನೂ ಕೆಜಿಎಫ್ ಚಿತ್ರವನ್ನ ಎರಡು ಭಾಗಗಳಾಗಿ ತೆರೆಗೆ ತರ್ತಿರೋದ್ರಿಂದ, ಎರಡನೇ ಭಾಗದ ಕೆಲಸಗಳು ಯಾವಾಗ ಶುರುವಾಗುತ್ತೆ ಅಂತ ಕಾದು ನೋಡ್ಬೇಕು. ಒಂದು ವೇಳೆ ಮತ್ತೆ ಕೆಜಿಎಫ್​​ ಶೂಟಿಂಗ್ ಶುರುವಾದ್ರೆ, ಯಶ್ ಲುಕ್ ಹಾಗೇಯೇ ಮುಂದುವರೆದ್ರೂ ಅಚ್ಚರಿಪಡಬೇಕಿಲ್ಲ.

Next Story

RELATED STORIES