Top

ಉಪ ಲೋಕಸಭಾ ಚುನಾವಣೆ: ಸಮಬಲದಲ್ಲೂ ಬಿಜೆಪಿಗೆ ಆಘಾತ

ಉಪ ಲೋಕಸಭಾ ಚುನಾವಣೆ: ಸಮಬಲದಲ್ಲೂ ಬಿಜೆಪಿಗೆ ಆಘಾತ
X

ದೇಶಾದ್ಯಂತ ನಡೆದ ನಾಲ್ಕು ಲೋಕಸಭೆ ಹಾಗೂ 11 ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ಆಘಾತ ಉಂಟಾಗಿದ್ದು, 2019 ಲೋಸಕಭಾ ಚುನಾವಣೆಯ ಮೇಲೆ ಕಣ್ಣು ನೆಟ್ಟಿರುವ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಮೇಲುಗೈ ಸಾಧಿಸಿದೆ.

ನಾಲ್ಕು ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟಗಳು ತಲಾ 2 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಸಮಬಲ ಸಾಧಿಸಿವೆ. ಆದರೆ ಬಿಜೆಪಿಯ ಭದ್ರಕೋಟೆ ಎಂದೇ ಭಾವಿಸಲಾಗಿದ್ದ ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲುಂಡು ದೊಡ್ಡ ಆಘಾತಕ್ಕೆ ಒಳಗಾಗಿದೆ.

ಕಾಂಗ್ರೆಸ್​, ಸಮಾಜವಾದಿ ಹಾಗೂ ಬಹುಜನ ಸಮಾಜವಾದಿ ಪಕ್ಷಗಳ ಬೆಂಬಲದೊಂದಿಗೆ ಕೈರಾನಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಆರ್​ಎಲ್​ಡಿ ಪಕ್ಷದ ತಬಾಸುಮ್ ಹಸನ್ ಜಯ ಗಳಿಸಿದ್ದಾರೆ. ಕಳೆದ ಬಾರಿ ಜಯಗಳಿಸಿದ್ ಬಿಜೆಪಿ ಅಭ್ಯರ್ಥಿ ಸೋಲುಂಡಿದ್ದಾರೆ.

ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರಿಯ ಜನತಾದಳ ಪಕ್ಷ ಜೋಕಿಹತ್ ಲೋಕಸಭಾ ಕ್ಷೇತ್ರವನ್ನು ಗೆದ್ದುಕೊಂಡಿದ್ದು, ಬಿಜೆಪಿ ಹಾಗೂ ನಿತಿಶ್ ಕುಮಾರ್ ಮೈತ್ರಿಕೂಟದ ಅಭ್ಯರ್ಥಿ 41 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್ ಮತ್ತು ಉತ್ತರಾಖಂಡ್​ಗಳಲ್ಲಿ ಬಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

ಉಳಿದಂತೆ ಗುರುವಾರ ಹೊರಬಿದ್ದ 11 ವಿಧಾನಸಭಾ ಉಪಚುನಾವಣೆಯ ಫಲಿತಾಂಶಗಳ ಪೈಕಿ 6 ವಿವಿಧ ಪಕ್ಷಗಳು ಜಯ ಗಳಿಸಿದರೆ, 4ರಲ್ಲಿ ಕಾಂಗ್ರೆಸ್ ಹಾಗೂ 1ರಲ್ಲಿ ಬಿಜೆಪಿ ಜಯ ಗಳಿಸಿದೆ.

Next Story

RELATED STORIES