Top

ಮಗು ಕೊಂದು ಆತ್ಮಹತ್ಯೆಗೆ ಯತ್ನಿಸಿದ ನಿರೂಪಕ ಚಂದನ್ ಪತ್ನಿ

ಮಗು ಕೊಂದು ಆತ್ಮಹತ್ಯೆಗೆ ಯತ್ನಿಸಿದ ನಿರೂಪಕ ಚಂದನ್ ಪತ್ನಿ
X

ದೊಡ್ಡಬಳ್ಳಾಪುರ: ನಿರೂಪಕ ಚಂದನ್ ಪತಿ ಸಾವಿನ ದುಃಖ ತಾಳಲಾರೆ ಮಗನನ್ನು ಕತ್ತು ಕೊಯ್ದು ಕೊಂದು ಪತ್ನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

24ರಂದು ದಾವಣಗೆರೆಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಚಂದನ್ ಮೃತಪಟ್ಟಿದ್ದರು. ಚಂದನ ಸಾವಿನಿಂದ ವಿಚಲಿತರಾಗಿದ್ದ ಪತ್ನಿ ವೀಣಾ ಗುರುವಾರ ಬೆಳಗ್ಗೆ ಮಗುವಿನ ಕತ್ತು ಕೊಯ್ದು ಕೊಂದಿದ್ದು ಅಲ್ಲದೇ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

13 ವರ್ಷದ ಮಗು ತುಷಾರ್ ಸ್ಥಳದಲ್ಲೇ ಮೃತಪಟ್ಟಿದ್ದು, 38 ವರ್ಷದ ವೀಣಾ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೀಣಾ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸರ ಭೇಟಿ ಪರಶೀಲನೆ ನಡೆಸಿದರು.

Next Story

RELATED STORIES