Top

ಡಿಕೆಶಿಗೆ ಆಮೀಷ ಒಡ್ಡಿದ್ದ ಅಮಿತ್ ಶಾ: ಲಿಂಗಪ್ಪ ಬಾಂಬ್

ಡಿಕೆಶಿಗೆ ಆಮೀಷ ಒಡ್ಡಿದ್ದ ಅಮಿತ್ ಶಾ: ಲಿಂಗಪ್ಪ ಬಾಂಬ್
X

ರಾಮನಗರ: ಗುಜರಾತ್ ರಾಜ್ಯಸಭಾ ಚುನಾವಣೆ ವೇಳೆ ಬಿಡದಿ ರೆಸಾರ್ಟ್​ಗೆ ಅಲ್ಲಿನ ಶಾಸಕರನ್ನು ಕರೆ ತಂದಿದ್ದ ಡಿ.ಕೆ. ಶಿವಕುಮಾರ್​ಗೆ ಕರೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿಮಗೆ ತುಂಬಾ ದೊಡ್ಡ ಸಹಾಯ ಮಾಡುತ್ತೇನೆ ಎಂದು ಆಮೀಷ ಒಡ್ಡಿದ್ದರು ಎಂಬ ರಹಸ್ಯವನ್ನು ಕಾಂಗ್ರೆಸ್ ಶಾಸಕ ಸಿ.ಎಂ. ಲಿಂಗಪ್ಪ ಬಹಿರಂಗಪಡಿಸಿದ್ದಾರೆ.

ಡಿಕೆ ಶಿವಕುಮಾರ್ ಅವರಿಗೆ ಅಮಿತ್ ಶಾ ಕರೆ ಮಾಡಿದಾಗ ನಾನು ಅಲ್ಲಿಯೇ ಇದ್ದೆ. ಅಮಿತ್ ಶಾ 38 ಶಾಸಕರನ್ನು ನೀನೆ ಇಟ್ಟುಕೊ. ನಾಲ್ವರನ್ನು ನನಗೆ ಕೊಡು. ಇದಕ್ಕೆ ಪ್ರತಿಕ್ರಿಯೆಯಾಗಿ ನಿನಗೆ ತುಂಬಾ ದೊಡ್ಡ ಸಹಾಯ ಮಾಡುತ್ತೇನೆ ಎಂದಿದ್ದರು.

ಶಾ ಅವರ ಆಮೀಷಕ್ಕೆ ಒಳಗಾಗದ ಡಿ.ಕೆ. ಶಿವಕುಮಾರ್​, ನಾನು ಪಕ್ಕಾ ಕಾಂಗ್ರೆಸ್ಸಿಗ, ನನ್ನ ದೇಹದಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಈ ವಿಚಾರದಲ್ಲಿ ನನ್ನ ಕ್ಷಮಿಸಿ ಎಂದು ಅಮಿತ್ ಷಾ ಗೆ ಹೇಳಿದ್ದರು ಎಂದು ಲಿಂಗಪ್ಪ ಹೇಳಿದರು.

Next Story

RELATED STORIES