Top

ಸಂಪುಟ ವಿಸ್ತರಣೆ ಬೆನ್ನಲ್ಲೇ ಸರಕಾರ ಪತನ?

ಸಂಪುಟ ವಿಸ್ತರಣೆ ಬೆನ್ನಲ್ಲೇ ಸರಕಾರ ಪತನ?
X

ಸಂಪುಟ ವಿಸ್ತರಣೆ ಆದ ಒಂದು ವಾರದ ಬಳಿಕ ಸಮ್ಮಿಶ್ರ ಸರ್ಕಾರ ಕುಸಿದು ಬೀಳುತ್ತೆ. ರೈತರ ಸಾಲ ಮನ್ನಾ ಮಾಡುವರೆಗೂ ಸರ್ಕಾರ ಇರಲಿ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ‌ ಭವಿಷ್ಯ ನುಡಿದಿದ್ದಾರೆ.

ಮಧುಗಿರಿ ಕ್ಷೇತ್ರದಲ್ಲಿ ಪರಾಜಿತಗೊಂಡಿದ್ದ ಕೆ.ಎನ್. ರಾಜಣ್ಣ ಮಧುಗಿರಿಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ಸಿಎಂ ಕುಮಾರಸ್ವಾಮಿಯೇ ಹೇಳಿದ್ದಾರೆ ನನಗೆ ಮುಖ್ಯಮಂತ್ರಿ ಪದವಿ ಬೇಕಾಗಿಲ್ಲ. ರಾಜೀನಾಮೆ ಕೊಟ್ಟು ಹೋಗ್ತಿನಿ ಅಂತ. ಹಾಗಾಗಿ ಮರು‌‌‌ ಚುನಾವಣೆ ಯಾವ ಕ್ಷಣದಲ್ಲಾದರೂ ಬರಬಹುದು ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆದ ‌24 ಗಂಟೆಯಲ್ಲಿ ಸಾಲ ಮನ್ನಾ ಮಾಡ್ತಿನಿ ಅಂದಿದ್ದರು. ಒಂದುವಾರ ಆದ್ರೂ ಸಾಲ ಮನ್ನಾ ಮಾಡಿಲ್ಲ. ಇನ್ನೂ ಒಂದುವಾರ ಕಾದು ಕುಮಾರಸ್ವಾಮಿ ವಿರುದ್ದ ಬೀದಿಗಿಳಿದು ಹೋರಾಟ ಮಾಡ್ತಿವಿ. 35 ಕೆ.ಜಿ ಅಕ್ಕಿ ಕೊಡ್ತಿನಿ ಅಂದಿದ್ದರು. ಅದೂ ಕೊಡುವ ಲಕ್ಷಣ ಕಾಣ್ತಾ ಇಲ್ಲ ಎಂದು ರಾಜಣ್ಣ ಹೇಳಿದ್ದಾರೆ.

ಮಹಿಳೆಯರನ್ನು ಸೇರಿಸಿ ಮಾತು ತಪ್ಪಿದ ಸಿಎಂ ಕುಮಾರಸ್ವಾಮಿ ವಿರುದ್ದ ಹೋರಾಟ ಮಾಡಬೇಕು. ಪ್ರಣಾಳಿಕೆ ಯಲ್ಲಿನ ಭರವಸೆ ಈಡೇರಿಸದೇ ಇದ್ದುದಕ್ಕೆ ನಾಡಿನ ಜನರ ಕ್ಷಮಾಪಣೆ ಕೇಳುವಂತೆ ಆಗ್ರಹಿಸಬೇಕು.

Next Story

RELATED STORIES