Top

ಜಾಹಿರಾತಿಗಾಗಿ ಸಿದ್ದು ಸರ್ಕಾರ ಖರ್ಚು ಮಾಡಿದ್ದೆಷ್ಟು ಗೊತ್ತಾ?

ಜಾಹಿರಾತಿಗಾಗಿ ಸಿದ್ದು ಸರ್ಕಾರ ಖರ್ಚು ಮಾಡಿದ್ದೆಷ್ಟು ಗೊತ್ತಾ?
X

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರಕಾರದ ಅವಧಿಯಲ್ಲಿ ಜಾಹೀರಾತಿಗಾಗಿ 5 ವರ್ಷಗಳಲ್ಲಿ 226 ಕೋಟಿ ರೂ. ಖರ್ಚು ಮಾಡಿದ್ದಾರೆ.

ಆರ್​ಟಿಐ ಅಡಿ ಭೀಮಪ್ಪ ಗಡಾದ್ ಅವರಿಗೆ ನೀಡಲಾದ ಮಾಹಿತಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಪೂರ್ಣ 5 ವರ್ಷ ಜಾಹೀರಾತಿಗಾಗಿ ಬಳಕೆಯಾದ ಮೊತ್ತದ ವಿವರ ನೀಡಲಾಗಿದೆ. ಇದರಲ್ಲಿ ಆಡಳಿತದ ಕೊನೆಯ ವರ್ಷವಾದ 2017-18ರಲ್ಲಿ ಅತೀ ಹೆಚ್ಚು ಅಂದರೆ 142 ಕೋಟಿ ರೂ. ಖರ್ಚು ಮಾಡಿದೆ.

2013-14ರಲ್ಲಿ 13.46 ಕೋಟಿ ಖರ್ಚು ಮಾಡಿದ್ದ ಸಿದ್ದು ಸರಕಾರ, 2014-15ರಲ್ಲಿ 14.68 ಕೋಟಿ ರೂ., 2015-16ರಲ್ಲಿ 22 ಕೋಟಿ ರೂ., 2016-17ರಲ್ಲಿ 34 ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ನಾಲ್ಕು ವರ್ಷಗಳಲ್ಲಿ ಖರ್ಚು ಮಾಡಿದಷ್ಟು ಮೊತ್ತವನ್ನು ಅಂತಿಮ ವರ್ಷದ ಕೊನೆಯಲ್ಲಿ ಒಂದೇ ಬಾರಿಗೆ ಖರ್ಚು ಮಾಡಲಾಗಿದೆ.

Next Story

RELATED STORIES