Top

ನಾನು ಟೆರರಿಸ್ಟ್ ಅಲ್ಲ ಅಂತಾ ಅಂದಿದ್ಯಾಕೆ ಸಂಜು..?

ನಾನು ಟೆರರಿಸ್ಟ್ ಅಲ್ಲ ಅಂತಾ ಅಂದಿದ್ಯಾಕೆ ಸಂಜು..?
X

ಈ ವರ್ಷದ ಬಾಲಿವುಡ್​ನಲ್ಲಿ ತೀವ್ರ ಕುತೂಹಲ ಮೂಡಿಸಿರುವ ಜೀವನಾಧಾರಿತ ಸಿನಿಮಾ ಸಂಜು. ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ಜೀವನಾಧಾರಿತ ಈ ಚಿತ್ರಕ್ಕೆ ರಾಜ್​ಕುಮಾರ್ ಹಿರಾನಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಣ್​​ಬೀರ್ ಕಪೂರ್ ಚಿತ್ರದಲ್ಲಿ ಸಂಜಯ್​ ದತ್​​ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸ್ಯಾಂಪಲ್​ಗಳಲ್ಲಿ ಥೇಟ್​​ ಸಂಜು ಬಾಬಾನಂತೆ ಕಾಣುವ ರಣ್ಬೀರ್​​ ಟ್ರೈಲರ್​​ನಲ್ಲಿ ಮೋಡಿ ಮಾಡಿದ್ದಾರೆ.

ಸಂಜಯ್ ದತ್ ಹೀರೋ ಆಗಿ ತೆರೆಮೇಲೆ ಕಮಾಲ್ ಮಾಡಿದಷ್ಟೆ, ನಿಜಜೀವನದಲ್ಲಿ ವಿವಾದಗಳಿಂದ ಸುದ್ದಿಯಾಗಿದ್ದಾರೆ. ಕೊನೆಗೆ ಸೆರೆವಾಸವನ್ನ ಕೂಡ ಅನುಭವಿಸಿ ಬಂದಿದ್ದಾರೆ. ಹಾಗಾಗಿ ಸಂಜಯ್ ದತ್ ಲೈಫ್​ ಸ್ಟೋರಿ ಸಿನಿಮಾ ಬಹಳ ಕುತೂಹಲ ಕೆರಳಿಸಿದೆ. ಬಾಲ್ಯದಿಂದ ಇಲ್ಲಿಯವರೆಗಿನ ಸಂಜಯ್ ದತ್ ಕಥೆಯನ್ನ ಈ ಚಿತ್ರದಲ್ಲಿ ಹೇಳಲಾಗ್ತಿದೆ. ಸಂಜಯ್ ದತ್ ಬಾಲ್ಯ, ಮಾದಕ ವ್ಯಸನಕ್ಕೆ ತುತ್ತಾದ ಸಂದರ್ಭ, ವಿಲಾಸಿ ಜೀವನ, ರಸ್ತೆಬದಿ ಭಿಕ್ಷೆ ಬೇಡಿದ ಘಟನೆ, ಭೂಗತಲೋಕದ ಜೊತೆಗಿನ ನಂಟು, ಜೈಲುಪಾಲಾಗಿದ್ದು, ಹೀಗೆ ಪ್ರತಿಯೊಂದು ವಿಚಾರವನ್ನೂ ಈ ಚಿತ್ರದಲ್ಲಿ ಎಳೆಎಳೆಯಾಗಿ ಬಿಡಿಸಿಡಲಾಗ್ತಿದೆ.

‘ಬಯೋಪಿಕ್ ಮಾಡುವಂತ ವೆರೈಟಿ ಲೈಫ್ ಯಾರಿಗೆ ಸಿಗುತ್ತೆ ಹೇಳಿ..? ಯಾಕಂದ್ರೆ, ನಾನೊಬ್ಬ ಪೊರ್ಕಿ, ಡ್ರಗ್ಸ್​​ಗೆ ಅಡಿಕ್ಟ್​ ಆಗಿದ್ದವನು. ಆದ್ರೆ ಟೆರರಿಸ್ಟ್ ಮಾತ್ರ ಅಲ್ಲ’ ಅನ್ನೋ ಡೈಲಾಗ್​ ಜೊತೆಗೆ ಶುರುವಾಗೋ ಟ್ರೈಲರ್ ಸಂಜಯ್ ದತ್ ಲೈಫ್​​ನ ವಿವಿಧ ಮುಖಗಳ ಪರಿಚಯ ಮಾಡಿಸುತ್ತೆ. ಸಂಜಯ್ ತಂದೆ ಪಾತ್ರದಲ್ಲಿ ಪರೇಶ್ ರಾವಲ್, ಎರಡನೇ ಹೆಂಡತಿ ಮಾನ್ಯತಾ ಪಾತ್ರದಲ್ಲಿ ದಿಯಾ ಮಿರ್ಜಾ, ತಿನಾ ಮುನಿಮ್ ಆಗಿ ಸೋನಮ್, ಲಾಯರ್ ಪಾತ್ರದಲ್ಲಿ ಅನುಷ್ಕಾ ಶರ್ಮಾ ಬಣ್ಣ ಹಚ್ಚಿದ್ದಾರೆ. ಸಂಜಯ್ ದತ್ ಬಯೋಪಿಕ್ ಸಂಜು ಜೂನ್ 28ಕ್ಕೆ ತೆರೆಗಪ್ಪಳಿಸಲಿದೆ.

Next Story

RELATED STORIES