Top

ಮತ್ತೆ ರಣಧೀರ ನೋಡ್ತಿರ: ಜನ್ಮದಿನ ಆಚರಿಸಿಕೊಂಡ ಕ್ರೇಜಿಸ್ಟಾರ್

ಮತ್ತೆ ರಣಧೀರ ನೋಡ್ತಿರ: ಜನ್ಮದಿನ ಆಚರಿಸಿಕೊಂಡ ಕ್ರೇಜಿಸ್ಟಾರ್
X

ಈ ವರ್ಷ ಮತ್ತೆ ರಣಧೀರನನ್ನ ನೋಡ್ತಿರಾ. ಮುಂದೆ ಹೊಸ ಕಾನ್ಸೆಪ್ಟ್​ನೊಂದಿಗೆ ಬರುತ್ತೇನೆ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಮುನ್ಸೂಚನೆ ನೀಡಿದ್ದಾರೆ.

ಪಡ್ಡೆಹುಲಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದೂ ಅಲ್ಲದೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿಚಂದ್ರನ್​, ಅಭಿಮಾನಿಗಳಿಗೋಸ್ಕರ ನಾನು ಬರ್ತಡೇ ಮಾಡಿಕೊಳ್ಳುತ್ತೇನೆ. ಮುಂಚೆ ನಾನು ಅಂಬರೀಷ್ ಸೇರಿ ಬರ್ತಡೇ ಆಚಾರಿಸುತ್ತಿದ್ದೆವು. ಕದೀಮ ಕಳ್ಳರು ಚಿತ್ರದ ವೇಳೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಈಗಲೂ ನೆನಪಿದೆ. ಅಭಿಮಾನಿಗಳಿಗೋಸ್ಕರ 4 ಗಂಟೆ ನಿಂತ್ಕೊಂಡು ಬೇಕಾದರೂ ಫೋಟೋ ತೆಗಿಸಿಕೊಳ್ತೀನಿ. ನನ್ನ ತಂದೆಯ ಜತೆ ಸೇರಿ ಮಾಡಿದ ಬರ್ತಡೇ ನನಗೆ ಮರೆಯೋದಕ್ಕೆ ಸಾಧ್ಯವಿಲ್ಲ ಎಂದು ತಂದೆಯನ್ನು ನೆನಪಿಸಿಕೊಂಡರು.

ಕೆ.ಮಂಜು ಅವರಿಗಾಗಿ ರಾಜೇಂದ್ರ ಪೊನ್ನಪ್ಪ ಕೈಗೆತ್ತಿಕೊಂಡಿರುವ ರವಿಚಂದ್ರನ್​, ಕ್ಲಾಸ್ ಮಾಸ್ ಸೇರಿ ರಾಜೇಂದ್ರ ಪೊನ್ನಪ್ಪ ಮಾಡ್ತೀನಿ. ಈ ವರ್ಷ ಮತ್ತೆ ರಣಧೀರನನ್ನ ನೋಡ್ತೀರಾ. ಈಗ ಹೊಸ ಕಾನ್ಸೆಪ್ಟ್ ಜೊತೆ ಬರ್ತೀನಿ ಎಂದರು.

ಮಂಜಿನ ಹನಿಯಿಂದ ದುಡ್ಡು ಕಳೆದುಕೊಂಡೆ. ರಾಜೇಂದ್ರ ಪೊನ್ನಪ್ಪ 50 ಕೋಟಿ ಕಲೆಕ್ಷನ್ ಮಾಡಿದರೆ ಮಂಜಿನ ಹನಿ ಶುರು ಮಾಡುತ್ತೇನೆ. ಅದನ್ನ ಮಾಡಲು ನನ್ನ ಬಳಿ ಹಣವಿಲ್ಲ. ಈಗಾಗಲೇ ಮಂಜಿನ ಹನಿಗಾಗಿ 8 ಕೋಟಿ ಕಳೆದುಕೊಂಡಿದ್ದೀನಿ ಎಂದು ರವಿಚಂದ್ರನ್ ನುಡಿದರು.

Next Story

RELATED STORIES