Top

ಕರ್ನಾಟಕದಲ್ಲಿ ಕಾಲಾ ಚಿತ್ರ ನಿಷೇಧ: ರಜನಿ ಹೇಳಿದ್ದೇನು ಗೊತ್ತಾ?

ಕರ್ನಾಟಕದಲ್ಲಿ ಕಾಲಾ ಚಿತ್ರ ನಿಷೇಧ: ರಜನಿ ಹೇಳಿದ್ದೇನು ಗೊತ್ತಾ?
X

ಕರ್ನಾಟಕದಲ್ಲಿ ಬಹುನಿರೀಕ್ಷಿತ ಕಾಲಾ ಚಿತ್ರ ಬಿಡುಗಡೆಗೆ ನಿಷೇಧ ವಿಧಿಸಿರುವ ಬಗ್ಗೆ ನಟ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದು, ವಿವಾದ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಲಾ ಚಿತ್ರವನ್ನು ಯಾವ ಕಾರಣಕ್ಕಾಗಿ ಕರ್ನಾಟಕದಲ್ಲಿ ನಿಷೇಧಿಸಲಾಗಿದೆ ಎಂದು ತಿಳಿದಿಲ್ಲ. ಈ ಬಗ್ಗೆ ದಕ್ಷಿಣ ಭಾರತೀಯ ಚಿತ್ರ ಮಂಡಳಿ ಮಧ್ಯ ಪ್ರವೇಶಿಸುವ ವಿಶ್ವಾಸವಿದೆ. ದಕ್ಷಿಣ ಭಾರತೀಯ ಚಿತ್ರ ಮಂಡಳಿಯ ಭಾಗ ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ಎಂದರು.

ನಾನು ಎಂದೋ ಹೇಳಿದ ಮಾತಿಗೆ ನಿನ್ನೆಯಷ್ಠೇ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯದಲ್ಲೇ ವಿವಾದ ಬಗೆಹರಿಯಲಿದೆ ಎಂದು ರಜನಿಕಾಂತ್ ಹೇಳಿದರು.

ರಜನಿಕಾಂತ್ ಅವರ ಈ ಹಿಂದಿನ ಕಬಾಲಿ ಚಿತ್ರ ಕರ್ನಾಟಕದಲ್ಲಿ 30 ಕೋಟಿ ರೂ. ಸಂಗ್ರಹಿಸಿತ್ತು.ಕರ್ನಾಟಕದಲ್ಲಿ ರಜನಿಕಾಂತ್ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದು, ಒಂದು ವೇಳೆ ಚಿತ್ರ ಬಿಡುಗಡೆ ಆಗದೇ ಇದ್ದರೆ ಕಾಲಾ ಚಿತ್ರದ ಗಳಿಕೆಯಲ್ಲಿ ಇಳಕೆಯಾಗಲಿದೆ.

Next Story

RELATED STORIES