ಚೆಂಡು ವಿರೂಪ ಪ್ರಕರಣ, ಆಟಗಾರರ ಅಶಿಸ್ತು ವಿರುದ್ಧ ಕಠಿಣ ಕ್ರಮ

X
TV5 Kannada30 May 2018 5:17 AM GMT
ಮುಂಬೈ: ಕ್ರಿಕೆಟ್ನಲ್ಲಿ ಚೆಂಡು ವಿರೂಪ ಪ್ರಕರಣ ಮತ್ತು ಆಟಗಾರರ ನಡುವೆ ಕ್ರೀಡಾ ಸ್ಫೂರ್ತಿ ಕಡಿಮೆಯಾಗುತ್ತಿರುವ ಕುರಿತು ಐಸಿಸಿ ಕ್ರಿಕೆಟ್ ಸಮಿತಿ ಅಸಮಾಧಾನ ವ್ಯಕ್ತಪಡಿಸಿದ್ದು ಕಠಿಣ ಶಿಕ್ಷೆಗಳನ್ನ ನೀಡುವಂತೆ ಶಿಫಾರಸು ಮಾಡಿತು. ನಿನ್ನೆ ಮುಂಬೈನಲ್ಲಿ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ಸಭೆ ಸೇರಿತು. ಸಭೆಯಲ್ಲಿ ಚೆಂಡು ವಿರೂಪ ಪ್ರಕರಣ ಭಾಗಿಯಾಗುವ ಆಟಗಾರರ ವಿರುದ್ಧ ಕಠಿಣ ಶಿಕ್ಷಗೆ ಗುರಿಪಡಿಸಲು ನಿರ್ಧರಿಸಲಾಯಿತು. ಆಟಗಾರರ ನಡುವೆ ಪರಸ್ಪರ ಗೌರವಿಸುವಂತೆ ಕ್ರಮಕೈಗೊಳ್ಳುವಂತೆ ತೀರ್ಮಾನಿಸಲಾಯಿತು. ಇನ್ನು ಟೆಸ್ಟ್ ನಲ್ಲಿ ಟಾಸ್ ಹಾಕುವುದು ಹಳೆಯ ಪದ್ದತಿಯಂತೆ ನಡೆಯಲಿದೆ ಎಂದು ಸಮಿತಿ ಹೇಳಿದೆ.
Next Story