Top

ಪಾರ್ವತಮ್ಮ ಹೆಸರಲ್ಲಿ ಯೋಗ, ಧ್ಯಾನ ಕೇಂದ್ರ..?

ಪಾರ್ವತಮ್ಮ ಹೆಸರಲ್ಲಿ ಯೋಗ, ಧ್ಯಾನ ಕೇಂದ್ರ..?
X

ಸ್ಯಾಂಡಲ್​ವುಡ್​ ಚಿತ್ರರಂಗದ ಆಲದಮರವಾಗಿದ್ದ , ಪಾರ್ವತಮ್ಮ ರಾಜ್​ಕುಮಾರ್ ನಿಧನರಾಗಿ ನಾಳೆಗೆ ಒಂದು ವರ್ಷ. ಪಾರ್ವತಮ್ಮನವರು ಜೀವನದ ಎಲ್ಲಾ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದವರು.

ಕನ್ನಡ ಚಿತ್ರರಂಗಕ್ಕೆ 90 ಅದ್ಭುತ ಮತ್ತು ಅದ್ಧೂರಿ ಸಿನಿಮಾಗಳನ್ನು ಕೊಟ್ಟವರು. ಸದಾ ಮನೆ ಮಕ್ಕಳ ಜೊತೆಗೆ ಬಂದು ಬಳಗ ಹಾಗೂ ಚಿತ್ರರಂಗದ ಮಂದಿಯ ಜೊತೆಗೆ ಲವಲವಿಕೆಯಿಂದ ಇದ್ದವರು ಪಾರ್ವತಮ್ಮ ರಾಜ್​​ಕುಮಾರ್. ಅವರಿಲ್ಲದೆ ಚಿತ್ರರಂಗದ ದೊಡ್ಮನೆಯೆಂದೆ ಖ್ಯಾತಿ ಹೊಂದಿದ್ದ ಡಾ.ರಾಜ್ ಮನೆ ಬಿಕ್ಕೋ ಎನ್ನುತ್ತಿದೆ.

ಪಾರ್ವತಮ್ಮನವರು ನಿಧನರಾಗಿ ಒಂದು ವರ್ಷದ ಪ್ರಯುಕ್ತ, ಡಾ.ರಾಜ್ ಕುಟುಂಬ ಪಾರ್ವತಮ್ಮನವರ ಸಮಾಧಿಗೆ ವಿಶೇಷ ಪೂಜೆ ಪುನಸ್ಕಾರವನ್ನು ಮಾಡಲಿದೆ. ಆ ದಿನ ಮಧ್ಯಾಹ್ನ ಸದಾಶಿವನಗರದ ಮನೆಯಲ್ಲಿ ಅಭಿಮಾನಿಗಳಿಗೆ ಹಾಗೂ ಕುಟುಂಬದವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಈ ಬಗ್ಗೆ ಟಿವಿ5 ಜೊತೆ ಮಾತನಾಡಿದ್ದ ನಟ ರಾಘವೇಂದ್ರ ರಾಜ್​​ಕುಮಾರ್ , ಅಮ್ಮನ ನೆನಪಿನಲ್ಲಿ ಸದಾ ನಾವೆಲ್ಲ ಉಸಿರಾಡುತ್ತಿದ್ದೇವೆ. ನಾಳೆ ನಮ್ಮ ಕುಟುಂಬ ಅಮ್ಮನ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಿದೆ. ನಮ್ಮ ಮನೆ ಮುಂದೆ, ಬಂಧು ಮಿತ್ರರಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ. ಅಮ್ಮ ಅಪ್ಪ ನಮ್ಮ ಪಾಲಿಗೆ ಸಾಕ್ಷಾತ್ ಪಾರ್ವತಿ ಪರಮೇಶ್ವರ . ಹೀಗಾಗಿ ಅಮ್ಮನ ಸ್ಮಾರಕ ಆಗುವ ಬಗ್ಗೆ ಹೊಸ ಸರ್ಕಾರದ ಬಳಿ ಮತ್ತೊಮ್ಮೆ ಮನವಿ ಮಾಡಿಕೊಳ್ಳಲಿದ್ದೇವೆ. ಮುಂದಿನ ದಿನಗಳಲ್ಲಿ ಅಮ್ಮ ಅಪ್ಪನ ಸ್ಮಾರಕವನ್ನು ಯೋಗ ಮತ್ತು ಧ್ಯಾನ ಕೇಂದ್ರ ಮಾಡುವ ಯೋಜನೆಯಲ್ಲಿದ್ದೇವೆ ಎಂದ್ದಿದ್ದಾರೆ.

Next Story

RELATED STORIES