Top

ಓಲಾ ಕ್ಯಾಬ್ ಬುಕ್ ಮಾಡಿ, ಏನು ಮಾಡಿದ್ರು ಗೊತ್ತಾ..?

ಓಲಾ ಕ್ಯಾಬ್ ಬುಕ್ ಮಾಡಿ, ಏನು ಮಾಡಿದ್ರು ಗೊತ್ತಾ..?
X

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಓಲಾ ಕ್ಯಾಬ್ ದರೋಡೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಗೊರಗುಂಟೆಪಾಳ್ಯಲ್ಲಿ ಓಲಾ ಕ್ಯಾಬ್ ಬುಕ್ ಮಾಡಿದ ಕಿಡಿಗೇಡಿಗಳು, ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾಚೋಹಳ್ಳಿಯಲ್ಲಿ ದರೋಡೆ ಮಾಡಿದ್ದಾರೆ. ನಿನ್ನೇ ರಾತ್ರಿ 12 ಗಂಟೆಯ ಸುಮಾರಿನಲ್ಲಿ, ಮಲ್ಲಿಕಾರ್ಜುನರ ಇಟಿಯೊಸ್ ಓಲಾ ಕ್ಯಾಬ್ ಏರಿದ ಕಳ್ಳರು, ನಂತರ ನಿಗದಿಯಂತೆ ಮಾಚೋಹಳ್ಳಿಗೆ ಸುಮಾರು ರಾತ್ರಿ 1.00 ಗಂಟೆ ವೇಳೆಯಲ್ಲಿ ಕ್ಯಾಬ್‌ನಲ್ಲಿ ತೆರಳಿ, ಚಾಲಕ ಮಲ್ಲಿಕಾರ್ಜುನ್‌ಗೆ ಥಳಿಸಿದ್ದಾರೆ. ನಂತರ ಕ್ಯಾಬ್ ಚಾಲಕನಿಗೆ ಮಾರಕಾಸ್ತ್ರಗಳಿಂದ ಬೆದರಿಕೆ ಹಾಕಿ, ಚಾಲಕನ ಬಳಿ ಇದ್ದ ಸುಮಾರು 16000 ಹಣ ಹಾಗೂ ಓಲಾ ಕ್ಯಾಬ್ ನ್ನ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.

Representative Picture

ಇನ್ನೂ ಈ ಘಟನೆಯು ನಿರ್ಜನ ಪ್ರದೇಶದಲ್ಲಿ ಯಾವುದೇ ಸುಳಿವು ಸಿಗದಂತೆ ನಡೆದಿದ್ದು, ಪೊಲೀಸರ ತನಿಖೆಗೆ ಸವಾಲಾಗಿದೆ. ತನ್ನ ಮಗಳನ್ನು ಶಾಲೆಗೆ ಸೇರಿಸಲು ಮೂರು ದಿನಗಳಿಂದ ನಿರಂತರವಾಗಿ ಕೆಲಸ ನಿರ್ವಹಿಸಿದ್ದ ಹಣವನ್ನು, ಲಪಟಾಯಿಸಿದ್ದು ಮಾನಸಿಕವಾಗಿ ನೋವಾಗಿದೆ ಎಂದು, ಕ್ಯಾಬ್ ಚಾಲಕ ತನ್ನ ಅಳಲನ್ನು ವ್ಯಕ್ತಪಡಿಸಿದ್ದಾರೆ. ಸಿನೀಮೀಯ ರೀತಿಯ ದರೋಡೆ ಪ್ರಕರಣ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Next Story

RELATED STORIES