Top

ಐಪಿಎಲ್ ಮುಗೀತು, ನಿಧಿ ಜೊತೆ ರಾಹುಲ್ ಸುತ್ತಾಟ

ಐಪಿಎಲ್ ಮುಗೀತು, ನಿಧಿ ಜೊತೆ ರಾಹುಲ್ ಸುತ್ತಾಟ
X

ಮುಂಬೈ: ಇತ್ತೀಚೆಗೆ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಅಬ್ಬರಿಸಿದ ಸ್ಟೈಲಿಶ್​ ಬ್ಯಾಟ್ಸ್ ಮನ್ ಕನ್ನಡಿಗ ಕೆ.ಎಲ್​. ರಾಹುಲ್​ ಗೆಳತಿ ಹಾಗೂ ನಟಿ ನಿಧಿ ಅಗರ್​ವಾಲ್ ಜೊತೆ ಸುತ್ತಾಡುತ್ತಿರುವುದು ಸಾಮಾಜಿಕ ಜಾಲತಾಣಗಳ ಸುದ್ದಿಗೆ ಆಹಾರವಾಗಿದೆ.

ಐಪಿಎಲ್​ನಲ್ಲಿ ಪಂಜಾಬ್​ ತಂಡ ಕಳಪೆ ಆಟವಾಡಿ ಪ್ಲೇಆಫ್​ಗೂ ಮುನ್ನವೇ ಟೂರ್ನಿಯಿಂದ ಹೊರಬಿದ್ದಿತ್ತು.ಆದ್ರೆ ತಂಡದ ಓಪನರ್​ ಕೆ.ಎಲ್​.ರಾಹುಲ್ ಒಳ್ಳೆಯ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದರು. ಪಂಜಾಬ್​ ತಂಡ ಟೂರ್ನಿಯಿಂದ ಹೊರ ಬಿದ್ದ ನಂತರ ಕೆ.ಎಲ್​. ರಾಹುಲ್ ತಮ್ಮ ಗೆಳತಿ ನಿಧಿ ಅಗರ್​ವಾಲ್​ ಜೊತೆ ಮುಂಬೈನ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಓಡಾಟದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಗಾಳಿ ಸುದ್ದಿಗಳು ಹರಿದಾಡುತ್ತಿವೆ.

Next Story

RELATED STORIES