Top

ಪೆಟ್ರೋಲ್​, ಡೀಸೆಲ್ ಬೆಲೆ 1 ಪೈಸೆ ಇಳಿಕೆ

ಪ್ರಸ್ತುತ ನಮ್ಮ ದೇಶದಲ್ಲಿ ಒಂದು, 2 ಮತ್ತು 5 ರೂಗೆ. ಬೆಲೆಯೇ ಇಲ್ಲದಂತಾಗಿದೆ. ಆದರೆ ಸತತ 16 ದಿನಗಳಿಂದ ಏರಿಕೆಯಾಗುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ ಕೊನೆಗೂ ಇಳಿಕೆಯಾಗಿದೆ. ಆದರೆ ಇಳಿಕೆಯಾದ ಮೊತ್ತ ಕೇವಲ 1 ಪೈಸೆ ಎಂಬ ಸುದ್ದಿ ದೇಶಾದ್ಯಂತ ಗ್ರಾಹಕರನ್ನು ಕೆರಳಿಸಿದೆ.

ಕರ್ನಾಟಕ ಲೋಕಸಭಾ ಚುನಾವಣೆ ನಂತರ ಸತತ 16 ದಿನಗಳಿಂದ ಏರಿಕೆ ದಾಖಲಿಸುತ್ತಲೇ ಬಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬುಧವಾರ ಬೆಳಗ್ಗೆ 56ರಿಂದ 60 ಪೈಸೆ ಅಂದರೆ ಸರಿಸುಮಾರು 1 ರೂ. ಇಳಿಕೆಯಾಗಲಿದೆ ಎಂಬ ಸುದ್ದಿ ಹರಡಿತ್ತು. ಆದರೆ ತೈಲ ಕಂಪನಿಗಳು ಕೇವಲ 1 ಪೈಸೆ ಇಳಿಕೆ ಮಾಡಿದೆ.

ಆಮ್​ ಆದ್ಮಿ ಪಕ್ಷ ಇಂಧನ ದರ ಇಳಿಕೆ ಹಾಸ್ಯಸ್ಪದ ಎಂದು ಬಣ್ಣಿಸಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಮೊದಲ ರಾಜ್ಯ ಕೇರಳ

ತಿರುವನಂತಪುರಂ, ಮೇ 30: ಪೆಟ್ರೋಲ್ ಬೆಲೆ ಏರಿಕೆ ಮೇಲೆ ನಿಯಂತ್ರಣ ಹೇರಲು ಕೇಂದ್ರ ವಿಫಲವಾಗಿರುವ ಬೆನ್ನಲ್ಲೆ ಕೇರಳ ರಾಜ್ಯ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಲೀಟರ್‌ಗೆ 1 ರೂಪಾಯಿ ಇಳಿಸಿ ಅಲ್ಪ ಹೊರೆಯನ್ನಾದರೂ ತಪ್ಪಿಸುವ ಕಾರ್ಯ ಮಾಡಿದೆ. ರಾಜ್ಯ ಸರ್ಕಾರವೊಂದು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಇಳಿಕೆ ಮಾಡಿರುವುದು ಇದೇ ಮೊದಲಾಗಿದ್ದು, ಇಂಧನ ಬೆಲೆ ದಾಖಲೆಯ ಏರಿಕೆ ಕಂಡಿರುವ ಈ ಸಮಯದಲ್ಲಿ ದರ ಇಳಿಸುವ ಮೂಲಕ ಕೇರಳ ರಾಜ್ಯವು ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಮೋದಿ ಸರಕಾರದಲ್ಲಿ ತೈಲ ಬೆಲೆ ಮಾತ್ರ ಐತಿಹಾಸಿಕ: ಮಾಯಾವತಿ ವ್ಯಂಗ್ಯ ಇಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಘೊಷಣೆ ಮಾಡಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ರೂ.509 ಕೋಟಿ ನಷ್ಟವಾಗಲಿದೆ. ದೇಶವೆಲ್ಲಾ ಇಂಧನ ಬೆಲೆ ನಿಯಂತ್ರಿಸಿ ಎಂದು ಕೇಳುತ್ತಿರುವಾಗ ಕೇಂದ್ರ ಕೈಕಟ್ಟಿ ಕೂತಿಗೆ ಇದರಿಂದ ರಾಜ್ಯಗಳು ನಷ್ಟ ಅನುಭವಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಕೇರಳ ರಾಜ್ಯವು ಪೆಟ್ರೋಲ್, ಡೀಸೆಲ್‌ ಮೇಲೆ ತಾನು ವಿಧಿಸುತ್ತಿದ್ದ ತೆರಿಗೆಯನ್ನು ಕಡಿಮೆ ಮಾಡಿ ಲೀಟರ್‌ಗೆ ಒಂದು ರೂಪಾಯಿ ಬೆಲೆ ಇಳಿಕೆ ಮಾಡಿ ಮಾದರಿಯಾಗಿದೆ. ದೆಹಲಿಯಲ್ಲಿ ದೇಶದಲ್ಲೇ ಅತಿ ಕಡಿಮೆ ಬೆಲೆಗೆ ಪೆಟ್ರೋಲ್ ಮತ್ತು ಡೀಸೆಲ್ ದೊರೆಯುತ್ತದೆ.

Next Story

RELATED STORIES