Top

ಗೌರಿ ಲಂಕೇಶ್​ ಹತ್ಯೆ ಕೇಸ್​, ಚಾರ್ಜ್​ಶೀಟ್​ ಸಲ್ಲಿಕೆ

ಗೌರಿ ಲಂಕೇಶ್​ ಹತ್ಯೆ ಕೇಸ್​, ಚಾರ್ಜ್​ಶೀಟ್​ ಸಲ್ಲಿಕೆ
X

ಸುಧೀರ್ಘ 9 ತಿಂಗಳ ನಂತರ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಎಸ್ ಐಟಿ ತಂಡ 3ನೇ ಎಸಿಎಂಎಂ ಕೋರ್ಟ್‌ಗೆ 661 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಗೌರಿ ಹತ್ಯೆ ಬಗ್ಗೆ ಎಸ್‌ಐಟಿ ಪ್ರಬಲ ಸಾಕ್ಷ್ಯಗಳನ್ನು ಕಲೆ ಹಾಕಿದ್ದು, ಆರೋಪ ಪಟ್ಟಿಯಲ್ಲಿ 131 ಸಾಕ್ಷಿಗಳನ್ನು ದಾಖಲಿಸಿದೆ.ಇನ್ನು ನವೀನ್ ಎಂಬಾತ ಗೌರಿ ಹತ್ಯೆ ಬಗ್ಗೆ ತನ್ನ ಸ್ನೇಹಿತರ ಜೊತೆ ಮಾತನಾಡಿಕೊಂಡಿದ್ದ ಸುಳಿವು ಸಿಕ್ಕಿದ್ದು, ಈ ನಡುವೆ ಕಾಣಿಸುತ್ತಿರಲಿಲ್ಲ ಎಲ್ಲಿ ಹೋಗಿದ್ದೆ ಎಂಬ ಸ್ನೇಹಿತರ ಪ್ರಶ್ನೆಗೆ ಉತ್ತರಿಸಿದ್ದ ನವೀನ್, ಟಿವಿ ನೋಡಲಿಲ್ವಾ, ಗೌರಿ ಕೇಸ್​ ಮಾಡಿದ್ದು ನಾವೇ ಅಂದಿದ್ದನಂತೆ.ಇನ್ನಿಬ್ಬರು ಸ್ನೇಹಿತರ ಮುಂದೆ ದೊಡ್ಡ ಟಾಸ್ಕ್​ ಇದೆ. ಪ್ರೊ.ಕೆ.ಎಸ್.​ ಭಗವಾನ್​ ಮುಗಿಸಬೇಕಿದೆ ಎಂದು ಹೇಳಿದ್ದನಂತೆ.ಎಸ್‌ಐಟಿ ನವೀನ್ ಸ್ನೇಹಿತರ ಹೇಳಿಕೆಗಳನ್ನು ಕೂಡ ದಾಖಲಿಸಿದ್ದು, ಎಫ್​ಎಸ್​ಎಲ್​ ಅಧಿಕಾರಿಗಳು ಸೇರಿ 131 ಜನರ ಹೇಳಿಕೆ ದಾಖಲಾಗಿದೆ.

ಇನ್ನು ಗೌರಿ ಮನೆ ಬಳಿ ರಕ್ತಸಿಕ್ತ ಬುಲೆಟ್ ಪತ್ತೆಯಾಗಿದ್ದು, ದೇಹ ಹೊಕ್ಕಿದ್ದ ಗುಂಡು ಎಫ್​ಎಸ್​ಎಲ್​ಗೆ ರವಾನೆಯಾಗಿತ್ತು. ಈ ವೇಳೆ ಡಿಎನ್‌ಎ ಟೆಸ್ಟ್ ನಲ್ಲಿ ಗೌರಿ ದೇಹದ ರಕ್ತ ಮತ್ತು ಬುಲೆಟ್ ಮೇಲಿನ ರಕ್ತದ ಮಾದರಿ ಒಂದೇ ಎಂಬ ಸತ್ಯ ಬಹಿರಂಗವಾಗಿದೆ. ಅಲ್ಲದೇ ಆರೋಪಿಗಳು ಡೈರಿಯಲ್ಲಿ ಕೋಡ್ ವರ್ಡ್‌ಗಳನ್ನು ನಮೂದು ಮಾಡಿದ್ದು, ಕೋಡ್ ವರ್ಡ್‌ಗಳಲ್ಲಿ ಹತ್ಯೆ ಹಿಂದಿನ ಮಾಹಿತಿ ಸಿಕ್ಕಿದೆ. ಆದ್ರೆ ಗೌರಿ ಲಂಕೇಶ್ ಗೆ ಗುಂಡು ಹಾರಿಸಿದ ವ್ಯಕ್ತಿ ಯಾರು ಎಂದು ಇನ್ನೂ ಪತ್ತೆಯಾಗಿಲ್ಲ.ಗೌರಿ ಹತ್ಯೆಗೆ ಬಳಸಿದ್ದ ವೆಪನ್ ಎಲ್ಲಿದೆ ಎಂಬುದು ನಿಗೂಢವಾಗಿದೆ.ಇನ್ನು 9 ತಿಂಗಳ ಸುಧೀರ್ಘ ತನಿಖೆ ನಡೆಸಿ, ಚಾರ್ಜ್ ಶೀಟ್ ದಾಖಲಿಸಲು ಮುಂದಾಗಿದೆ. ಇನ್ನು ಗೌರಿ ಕೇಸ್ ವಿಚಾರಣೆ ವೇಳೆ, ಎಂ.ಎಂ.ಕಲಬುರಗಿ ಹತ್ಯೆ ಸುಳಿವು ಸಿಗುವ ಸಾಧ್ಯತೆ ಇದೆ.

Next Story

RELATED STORIES