Top

ದ್ವಾರಕೀಶ್​ , ಗುರುಕಿರಣ್​ ಜುಗಲ್​ ಬಂದಿಯಲ್ಲಿ ಡಿಜೆಕೆ ಆಡಿಯೋ ಕಂಪೆನಿ

ದ್ವಾರಕೀಶ್​ , ಗುರುಕಿರಣ್​ ಜುಗಲ್​ ಬಂದಿಯಲ್ಲಿ ಡಿಜೆಕೆ ಆಡಿಯೋ ಕಂಪೆನಿ
X

ಸ್ಯಾಂಡಲ್ವುಡ್​ನ ಸೆಲೆಬ್ರೆಟಿಗಳು ಇತ್ತೀಚೆಗೆ ತಮ್ಮದೇ ನಿರ್ಮಾಣ ಸಂಸ್ಥೆ, ಡಿಸ್ಟ್ರಿಬ್ಯೂಶನ್​ ಕಂಪೆನಿ, ಆಡಿಯೋ ಕಂಪೆನಿಗಳನ್ನ ಹುಟ್ಟುಹಾಕ್ತಿದ್ದಾರೆ..ಈಗಾಗ್ಲೇ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಶ್ರೀಮುತ್ತು ಸಿನಿಸರ್ವಿಸ್​ ಪ್ರೊಡಕ್ಷನ್ ಹೌಸ್ ಮತ್ತು ಪುನೀತ್ ರಾಜ್​ಕುಮಾರ್ ಪಿಆರ್​ಕೆ ಆಡಿಯೋ ಸಂಸ್ಥೆಯನ್ನ ಶುರುಮಾಡಿದ್ದಾರೆ.

ಇದೀಗ ಕನ್ನಡ ಚಿತ್ರರಂಗದ ಮತ್ತಿಬ್ಬರು ಸೆಲೆಬ್ರೆಟಿಗಳು ಜುಗಲ್​ಬಂದಿಯಲ್ಲಿ ಆಡಿಯೋ ಕಂಪೆನಿಯನ್ನ ಶುರುಮಾಡಿದ್ದಾರೆ.ಹೌದು, ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಜೋಡಿ 'ಡಿಜೆಕೆ' ಎಂಬ ಹೆಸರಿನಲ್ಲಿ ಹೊಸ ಆಡಿಯೋ ಸಂಸ್ಥೆ ಹುಟ್ಟುಹಾಕಿದ್ದು, ಈ ಆಡಿಯೋ ಕಂಪನಿಯಲ್ಲಿ ಚಿರಂಜೀವಿ ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಚಿತ್ರದ ಹಾಡುಗಳನ್ನ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದಾರೆ.

ಈ ಸಮಾರಂಭಕ್ಕೆ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ ಸೇರಿದಂತೆ ಕನ್ನಡದ ಹಲವು ಸ್ಟಾರ್ ನಟರು ಭಾಗಿಯಾಗಿದ್ದು, ಕಿಚ್ಚ ಸುದೀಪ್​ ಮಾತ್ರ ತಮ್ಮ ಬೆಸ್ಟ್ ವಿಶಸ್​ನ್ನ ತಿಳಿಸಿದ್ದಾರೆ.ಇನ್ನು ಜೂನ್​ 15 ರಂದು ಅಮ್ಮ ಐ ಲವ್​ಯೂ ಸಿನಿಮಾ ತೆರೆಗೆ ಬರ್ತಿದೆ.

Next Story

RELATED STORIES