Top

ಅಥ್ಲೆಟಿಕ್ಸ್ ಗೆ ವಿದಾಯ ಘೋಷಿಸಿದ ಕನ್ನಡಿಗ ವಿಕಾಸ್​ ಗೌಡ

ಅಥ್ಲೆಟಿಕ್ಸ್ ಗೆ ವಿದಾಯ ಘೋಷಿಸಿದ ಕನ್ನಡಿಗ ವಿಕಾಸ್​ ಗೌಡ
X

ನವದೆಹಲಿ: ಕಾಮನ್​ವೆಲ್ತ್ ಚಿನ್ನದ ಪದಕ ವಿಜೇತ ​ಹಾಗೂ ಡಿಸ್ಕಸ್ ಸ್ಪರ್ಧಿ ಕನ್ನಡಿಗ ವಿಕಾಸ್ ಗೌಡ ಅಥ್ಲೀಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ಕುರಿತು ಅಥ್ಲೆಟಿಕ್ಸ್ ಫೆಡರೇಶನ್​ ಆಫ್​ ಇಂಡಿಯಾ ಟ್ವೀಟರ್​ ಮೂಲಕ ಖಚಿತಪಡಿಸಿದೆ. ಇದರೊಂದಿಗೆ ಕನ್ನಡಿಗ ವಿಕಾಸ್​ ಗೌಡ 15 ವರ್ಷಗಳ ಸುದೀರ್ಘ ಅಥ್ಲಿಟಿಕ್ಸ್ ಬದುಕಿಗೆ ವಿದಾಯ ಹೇಳಿದಂತಾಗಿದೆ.

34 ವರ್ಷದ ವಿಕಾಸ್​ ಗೌಡ ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದಾದ ನಂತರ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂದಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ಅಥ್ಲೀಟ್​ ವಿಕಾಸ್​ ಗೌಡ ಸದ್ಯದಲ್ಲೆ ನಿವೃತ್ತಿ ಘೋಷಿಸುತ್ತಾರೆ ಎಂದು ಹೇಳಲಾಗುತ್ತಿತ್ತು.

ಮೈಸೂರು ಮೂಲದವರಾದ ವಿಕಾಸ್​ ಗೌಡ ಅಮೆರಿಕಾದ ಮೇರಿ ಲ್ಯಾಂಡ್​ನಲ್ಲಿ ನೆಲೆಸಿದ್ದಾರೆ. 2010ರ ಕಾಮನ್​ವೆಲ್ತ್​ ಗೇಮ್ಸ್ ನಲ್ಲಿ ವಿಕಾಸ್​ ಗೌಡ ಪುರುಷರ ಡಿಸ್ಕಸ್​ ಥ್ರೊ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ನಂತರ 2014ರಲ್ಲಿ ಗ್ಲಾಸ್ಗೊದಲ್ಲಿ ನಡೆದ ಕಾಮನ್​ವೆಲ್ತ್​ನಲ್ಲಿ ಚಿನ್ನದ ಪದಕ ವಿಶ್ವ ಮಟ್ಟದಲ್ಲಿ ಭಾರತದ ಕೀತಿ ಪತಾಕೆಯನ್ನ ಹಾರಿಸಿದ್ದರು. 2010 ಮತ್ತು 2014ರಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದಿದ್ದರು. ವಿಕಾಸ್​ ಗೌಡ 66.28 ಮೀಟರ್​ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.

Next Story

RELATED STORIES