Top

ದೀಪಕ್ ಹೂಡಾ ಪ್ರೊ ಕಬಡ್ಡಿ ಇತಿಹಾಸದಲ್ಲೇ ದುಬಾರಿ ಆಟಗಾರ

ದೀಪಕ್ ಹೂಡಾ ಪ್ರೊ ಕಬಡ್ಡಿ ಇತಿಹಾಸದಲ್ಲೇ ದುಬಾರಿ ಆಟಗಾರ
X

ಮುಂಬೈ: ಭಾರತದ ದೀಪಕ್ ಹೂಡಾ 1.15 ಕೋಟಿ ರೂ.ಗೆ ಜೈಪುರ ತಂಡಕ್ಕೆ ಮಾರಾಟವಾಗಿದ್ದಾರೆ. ಈ ಮೂಲಕ ಪ್ರೊ ಕಬಡ್ಡಿ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಮುಂಬೈನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ 6ನೇ ಆವೃತ್ತಿಯ ಹರಾಜಿನಲ್ಲಿ ದೀಪಕ್ ನಿವಾಸ್ ಹೂಡಾ ಅವರನ್ನು ಜೈಪುರ್ ಪಿಂಕ್ ಪ್ಯಾಂಥರ್ಸ್ ಫ್ರಾಂಚೈಸಿ 1.15 ಕೋಟಿಗೆ ಖರೀದಿಸಿತು. ಈ ಮೂಲಕ 1 ಕೋಟಿ ರೂ.ಗೆ ಮಾರಾಟವಾಗಿದ್ದ ಫಜಲ್ ಅತ್ರಚಾಲಿ ಅವರ ದಾಖಲೆಯನ್ನು ಅಳಿಸಿಹಾಕಿದರು.

ಇದಕ್ಕೂ ಮುನ್ನ 26 ವರ್ಷದ ಡಿಫೆಂಡರ್​ ಫಾಜೆಲ್​ ಅತ್ರಚಾಲಿ 1 ಕೋಟಿ ರೂಪಾಯಿಗೆ ಯು ಮುಂಬಾ ಫ್ರಾಂಚೈಸಿ ಪಾಲಾಗಿದ್ದರು. ಹರಾಜಿನಲ್ಲಿ ಇವರ ಮೂಲ ಬೆಲೆ 30 ಲಕ್ಷ ರೂಪಾಯಿ ಆಗಿತ್ತು. ಹರಾಜಿನಲ್ಲಿ ಭಾರೀ ಬೇಡಿಕೆಯಲ್ಲಿದ್ದ ಪಾಜೆಲ್​ ಅವರನ್ನ ಖರೀದಿಸಲು ಜೈ ಪುರ ಪಿಂಕ್​ ಪ್ಯಾಂಥರ್ಸ್ ಕೂಡ ಭಾರೀ ಪೈಪೋಟಿ ನಡೆಸಿತು. ಆದರೆ ಇದಕ್ಕೆ ಮುಂಬೈ ಫ್ರಾಂಚೈಸಿ ಅವಕಾಶ ಕೊಡಲಿಲ್ಲ.

ಇನ್ನು ದಕ್ಷಿಣ ಕೋರಿಯಾದ ರೈಡರ್​ ಕಾಂಗ್​ ಕುನ್​ ಲೀ ಅವರನ್ನ ಹರ್ಯಾಣ ಸ್ಟೀಲರ್ಸ್ 33ಲಕ್ಷ ರೂಪಾಯಿಗೆ ಖರೀದಿ ಮಾಡಲು ಮುಂದಾಯಿತು. ಆದ್ರೆ ಬೆಂಗಾಲ್​ ವಾರಿಯರಸ್ ಫ್ರಾಂಚೈಸಿ ಎಫ್​ಬಿಎಂ ಕಾರ್ಡ್ ಬಳಸಿ ರಿಟೈನ್​ ಮಾಡಿಕೊಂಡಿತು. ಜಾಂಗ್​ ಕುನ್​ ಲೀ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಟವಾದ ಮೂರನೇ ಆಟಗಾರ ಎನಿಸಿದರು.

ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರರ ವಿವರ

  • ದೀಪಕ ನಿವಾಸ್ ಹೂಡಾ- ಜೈಪುರ್ ಪ್ಯಾಂಥರ್ಸ್​- 1.15 ಕೋಟಿ
  • ಫಾಜೆಲ್​ ಅತ್ರಚಾಲಿ - ಯು ಮುಂಬಾ - 1 ಕೋಟಿ
  • ಜಾಂಗ್​ ಕುನ್​ ಲೀ - ಬೆಂಗಾಲ್​ ವಾರಿಯರ್ಸ - 33 ಲಕ್ಷ
  • ಅಬೊಜರ್​ ಮಿಗಾನಿ - ತೆಲುಗು ಟೈಟಾನ್ಸ್ - 76 ಲಕ್ಷ
  • ಜಿಯಾ ಉರ್​ ರೆಹಮಾನ್​- ಬೆಂಗಾಲ್​ ವಾರಿಯರ್ಸ್- 33 ಲಕ್ಷ

Next Story

RELATED STORIES