Top

ಧೋನಿ ಫಾರ್ಮ್​ ಹೌಸ್​ ಹೇಗಿದೆ ಗೊತ್ತಾ?

ಧೋನಿ ಫಾರ್ಮ್​ ಹೌಸ್​ ಹೇಗಿದೆ ಗೊತ್ತಾ?
X

ರಾಂಚಿ: ಟೂರ್ನಿಯುದ್ದಕ್ಕೂ ಚೆನ್ನೈ ತಂಡದೊಂದಿಗಿದ್ದು ಬೆಂಬಲಿಸಿದ ಧೊನಿ ಪತ್ನಿ ಸಾಕ್ಷಿ ಸಿಂಗ್ ಇದೀಗ ರಾಂಚಿಯ ರಿಂಗ್​ ರೋಡ್​ನಲ್ಲಿರುವ ಫಾರ್ಮ್​ ಹೌಸ್​ಗೆ ಮರಳಿದ್ದಾರೆ. ವಿಶೇಷ ಏನಪ್ಪಾ ಅಂದರೆ 7 ಎಕರೆ ವಿಸ್ತೀರ್ಣದ ಈ ಫಾರ್ಮ್​ನಲ್ಲಿ ಏನಿಲ್ಲ ಅಂತಿಲ್ಲ. ಎಲ್ಲವೂ ಇದೆ.

ಈ ಬಗ್ಗೆ ಸ್ವತಃ ಮಿಸ್ಟರ್ ಕೂಲ್ ಎಂ.ಎಸ್​. ಧೋನಿ ಪತ್ನಿ ಸಾಕ್ಷಿ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಸುತ್ತಲೂ ಹಸಿರಿನಿಂದ ಕೂಡಿರುವ ಈ ಫಾರ್ಮ್​ ಹೌಸ್​ ಏಳು ಎಕರೆ ಜಾಗದಿಂದ ಕೂಡಿದೆ. ಫಾರ್ಮ್​ ಹೌಸ್​ಗೆ ಕೈಲಾಶ್​ಪತಿ ಎಂದು ನಾಮಕರಣ ಮಾಡಲಾಗಿದೆ. ಈ ಫಾರ್ಮ್​ ಹೌಸ್​ನ್ನ ಮೂರು ವರ್ಷದ ಹಿಂದೆ ಕಟ್ಟಲಾಗಿತ್ತು. ಈ ಫಾರ್ಮ್​ ಹೌಸ್​ನಲ್ಲಿ ಸ್ವಿಮ್ಮಿಂಗ್​ ಫೂಲ್​, ನೆಟ್​ ಪ್ರಾಕ್ಟಿಸ್​ ಫೀಲ್ಡ್ ಮತ್ತು ಆಧುನಿಕ ಜಿಮ್​ ಇದೆ.

Next Story

RELATED STORIES