ಇಂದಿನಿಂದ ಆರನೇ ಪ್ರೊ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆ

X
TV5 Kannada30 May 2018 5:49 AM GMT
ಮುಂಬೈ: ಬಹುನಿರೀಕ್ಷಿತ ಆರನೇ ಪ್ರೊ ಕಬಡ್ಡಿ ಲೀಗ್ನ ಹರಾಜು ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.
ಹರಾಜಿನಲ್ಲಿ ಒಟ್ಟು 422 ಆಟಗಾರರ ಹೆಸರು ಪ್ರಸ್ತಾಪವಾಗಲಿದೆ. ಇದರಲ್ಲಿ 87 ಆಟಗಾರರು ಫ್ಯುಚರ್ ಕಬಡ್ಡಿ ಹೀರೋಸ್ ಕಾರ್ಯಕ್ರಮದಡಿಯಲ್ಲಿ ಬಂದವರಾಗಿದ್ದಾರೆ. 14 ರಾಷ್ಟ್ರಗಳಿಂದ 58 ವಿದೇಶಿ ಆಟಗಾರರಿದ್ದಾರೆ.
ಟೂರ್ನಿಯ 12 ಫ್ರಾಂಚೈಸಿಗಳ ಪೈಕಿ 9 ಫ್ರಾಂಚೈಸಿಗಳು 21 ಆಟಗಾರರನ್ನ ರಿಟೈನ್ ಮಾಡಿಕೊಂಡಿವೆ. ಇನ್ನುಳಿದ ಮೂರು ಫ್ರಾಂಚೈಸಿಗಳು ಯುಪಿ ಯೋಧ, ಯು ಮುಂಬಾ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಹೊಸ ಆಟಗಾರರನ್ನ ಖರೀದಿಸಲು ನಿರ್ಧರಿಸಿವೆ. ಆಟಗಾರರನ್ನ ಖರೀದಿಸಲು ಪ್ರತಿ ಫ್ರಾಂಚೈಸಿಗೆ 4 ಕೋಟಿ ರೂಪಾಯಿ ಲಭ್ಯವಿದೆ. ಪ್ರತಿ ಫ್ರಾಂಚೈಸಿ ತಂಡ ಕಟ್ಟು 18ರಿಂದ 25 ಆಟಗಾರರನ್ನ ಖರೀದಿಸಬಹುದಾಗಿದೆ.
Next Story