ನಲಪಾಡ್ ಜಾಮೀನು ತಿರಸ್ಕೃತ: 100 ದಿನ ದಾಟಿದ ಜೈಲುವಾಸ

X
TV5 Kannada30 May 2018 12:13 PM GMT
ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ಗೆ ಜಾಮೀನು ನೀಡಲು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಈ ಮೂಲಕ ನಲಪಾಡ್ ಜೈಲು ವಾಸ 100 ದಿನ ದಾಟಿತು.
ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ ಹಿನ್ನೆಲೆಯಲ್ಲಿ ನಲಪಾಡ್ ಜಾಮೀನು ಕೊರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಬುಧವಾರಕ್ಕೆ ತೀರ್ಪು ಕಾಯ್ದಿರಿಸಿತ್ತು.
ಸಿಸಿಎಚ್ 63ರ ನ್ಯಾಯಮೂರ್ತಿ ಪರಮೇಶ್ವರ್ ಪ್ರಸನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. ಇದರೊಂದಿಗೆ ಎರಡನೇ ಬಾರಿ ಜಾಮೀನು ಅರ್ಜಿ ತಿರಸ್ಕೃತಗೊಂಡಂತಾಗಿದೆ.
ವಿದ್ವತ್ ಮೇಲೆ ನಲಪಾಡ್ & ಗ್ಯಾಂಗ್ ಹಲ್ಲೆ ಫೆ 17 ರಂದು ಯುಬಿ ಸಿಟಿಯಲ್ಲಿ ಹಲ್ಲೆ ನಡೆಸಿತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಬಿ ಪೊಲೀಸರು ತನಿಖೆ ನಡೆಸಿ ಚಾರ್ಚ್ ಶೀಟ್ ಸಲ್ಲಿಸಿದ್ದರು.
Next Story