Top

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವಪತ್ತೆ
X

ಮೈಸೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವಪತ್ತೆಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.ಮೈಸೂರು ತಾಲೂಕಿನ ಬ್ಯಾತಹಳ್ಳಿಯಲ್ಲಿ ಈ ಘಟನೆ ನಡೆದಿದ್ದು,ಕಾವ್ಯಾ(24) ಆತ್ಮಹತ್ಯೆಗೆ ಶರಣಾಗಿರುವ ಗೃಹಿಣಿ. ಮೂರು ದಿನಗಳ ಹಿಂದಷ್ಟೇ ಬಾಣಂತನ ಮುಗಿಸಿ ಕಾವ್ಯಾ ಪತಿಯ ಮನೆಗೆ ಆಗಮಿಸಿದ್ದಳು.ಆದರೆ ಈಗ ನೇಣು ಬಿಗಿದ ಸ್ಥಿತಿಯಲ್ಲಿ ಕಾವ್ಯಾಳ ಮೃತದೇಹ ಪತ್ತೆಯಾಗಿದ್ದು, ಕಾವ್ಯಾಳ ಪೋಷಕರು ಪತಿ ಮಹೇಶ್ ಮತ್ತು ಆತನ ಪೋಷಕರೇ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆಕೆಯ ಮೇಲೆ ಹಲ್ಲೆ ನಡೆಸಿ, ನೇಣು ಹಾಕಿದ್ದಾರೆಂದು ಪೋಷಕರು ಆರೋಪಿಸಿದ್ದು, ಮಹೇಶ್ ಬಂಧನಕ್ಕೆ ಕಾವ್ಯಾ ಪೋಷಕರು ಆಗ್ರಹಿಸಿದ್ದಾರೆ. ಇನ್ನು ಸ್ಥಳಕ್ಕೆ ಕಡಕೊಳ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮಹೇಶ್ ಮತ್ತು ಆತನ ತಂದೆ ತಾಯಿ ನಾಪತ್ತೆಯಾಗಿದ್ದಾರೆ.

Next Story

RELATED STORIES