Top

ಪತಿಯ ಸಂಬಳ ಎಷ್ಟೆಂದು ಕೇಳಲು ಪತ್ನಿಗಿದೆ ಸಂಪೂರ್ಣ ಹಕ್ಕು

ಪತಿಯ ಸಂಬಳ ಎಷ್ಟೆಂದು ಕೇಳಲು ಪತ್ನಿಗಿದೆ ಸಂಪೂರ್ಣ ಹಕ್ಕು
X

ಪತಿಯ ಸಂಬಳ ಕೇಳಲು ಪತ್ನಿಗೆ ಸಂಪೂರ್ಣ ಹಕ್ಕಿದೆ ಎಂದು ಮಧ್ಯಪ್ರದೇಶದ ಉಚ್ಛ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಈ ಹಿಂದೆ ಒಂದು ಪ್ರಕರಣದಲ್ಲಿ ಬಿಎಸ್‌ಎನ್‌ಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಪವನ್ ಜೈನ್ ಎಂಬುವರ ಪತ್ನಿ ಸುನೀತಾ ಜೈನ್ ಆತನಿಂದ ಬೇರ್ಪಟ್ಟಿದ್ದು, ಪತಿಯ ಸಂಬಳ ಎಷ್ಟೆಂದು ತಿಳಿದುಕೊಳ್ಳಲು ಆತನ ಸ್ಯಾಲರಿ ಸ್ಲಿಪ್ ಪಡೆದುಕೊಳ್ಳಲು ಲಾಯರ್ ಕೋರ್ಟ್ ನಿರಾಕರಿಸಿತ್ತು. ಆದರೆ ಉಚ್ಛನ್ಯಾಯಾಲಯ ಆದೇಶವನ್ನು ಎತ್ತಿಹಿಡಿದಿದ್ದು, ಪತ್ನಿಗೆ ತನ್ನ ಪತಿಯ ಸಂಬಳ ಎಷ್ಟೆಂದು ತಿಳಿದುಕೊಳ್ಳಲು ಸಂಪೂರ್ಣ ಹಕ್ಕಿದೆ ಎಂದು ತೀರ್ಪು ನೀಡಿದೆ.ಸದ್ಯ ಸುನೀತಾ ಪತಿಯಿಂದ ಏಳು ಸಾವಿರ ರೂಪಾಯಿ ಜೀವನ ನಿರ್ವಹಣಾ ಭತ್ಯೆ ಪಡೆಯುತ್ತಿದ್ದು, ಪತಿಯ ಸಂಬಳ ಹೆಚ್ಚಿಗೆ ಇದ್ದರೆ, ವಿಚ್ಛೇದಿತ ಪತ್ನಿ ಅದಕ್ಕೆ ತಕ್ಕ ರೀತಿ ಜೀವನ ನಿರ್ವಹಣಾ ಭತ್ಯೆ ಪಡೆದುಕೊಳ್ಳಬಹುದು ಎಂದು ಕೋರ್ಟ್ ತೀರ್ಪು ನೀಡಿದೆ.

Next Story

RELATED STORIES