Top

ವೇದಾಂತ ತಾಮ್ರ ಘಟಕದ ವಿಸ್ತರಣೆಗೆ ಮಂಜೂರಾಗಿದ್ದ ಭೂಮಿ ರದ್ದು

ವೇದಾಂತ ತಾಮ್ರ ಘಟಕದ ವಿಸ್ತರಣೆಗೆ ಮಂಜೂರಾಗಿದ್ದ ಭೂಮಿ ರದ್ದು
X

ಚೆನ್ನೈ: ವೇದಾಂತ ಸಂಸ್ಥೆಯ ತಾಮ್ರ ಉತ್ಪಾದನಾ ಘಟಕದ 2ನೇ ಹಂತದ ವಿಸ್ತರಣೆಗಾಗಿ ಮಂಜೂರಾಗಿದ್ದ ಭೂಮಿಯನ್ನು ತಮಿಳುನಾಡು ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು ರದ್ದುಗೊಳಿಸಿದೆ. ಈ ಮೂಲಕ ಸ್ಟೇರ್​ಲೈಟ್​ ಎರಡನೇ ತಾಮ್ರ ವಿಸ್ತರಣೆ ಘಟಕ ವಿಸ್ತರಣೆಗೂ ಅಡ್ಡಿಯುಂಟಗಿದೆ.

ಸೋಮವಾರ ವೇದಾಂತ ಸಂಸ್ಥೆಯ ತಾಮ್ರ ಉತ್ಪಾದನಾ ಘಟಕವನ್ನು ಶಾಶ್ವತವಾಗಿ ಮುಚ್ಚಲು ತಮಿಳುನಾಡು ಸರಕಾರ ಆದೇಶಿಸಿತ್ತು. ಘಟಕದ ಸಾಮರ್ಥ್ಯ ಹೆಚ್ಚಿಸಿ, ಉತ್ಪಾದನೆಯನ್ನು ದ್ವಿಗುಣಗೊಳಿಸುವ ಉದ್ಧೇಶದಿಂದ ಭೂಮಿ ಮಂಜೂರಾತಿಗೆ ಸಂಸ್ಥೆ ನಿಗಮಕ್ಕೆ ಅರ್ಜಿ ಸಲ್ಲಿಸಿತ್ತು. ದಾಖಲೆಗಳನ್ನು ಪರೀಶೀಲಿಸಿ, ಸಂಸ್ಥೆಗೆ ಭೂಮಿ ಮಂಜೂರು ಮಾಡಿತ್ತು.

ಸಂಸ್ಥೆ ವಿರುದ್ಧ ಪರಿಸರ ಮಾಲಿನ್ಯದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರಕಾರ ಘಟಕವನ್ನು ಶಾಶ್ವತವಾಗಿ ಮುಚ್ಚಲು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸ್ಟೇರ್​ಲೈಟ್ ಇಂಡಸ್ಟ್ರೀಸ್ ಪ್ರಮೋಷನ್ ಕಾರ್ಪೊರೇಷನ್ ಸಂಸ್ಥೆಯ ಎರಡನೇ ಹಂತದ ವಿಸ್ತರಣೆ ಘಟಕಕ್ಕೆ ಮಂಜೂರಾಗಿದ್ದ ಭೂಮಿಯನ್ನು ರದ್ದುಗೊಳಿಸಲಾಗಿದ್ದು, ಭೂಮಿಗೆ ಪಾವತಿಸಲಾದ ಮೊತ್ತವನ್ನು ನಿಯಮಾನುಸಾರ ವಾಪಾಸು ಮಾಡಲಾಗುತ್ತದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ಶ್ರೀನಿವಾಸನ್‌ ತಿಳಿಸಿದ್ದಾರೆ.

ಜನರ ಹಾಗೂ ಸುತ್ತಮುತ್ತಲಿನ ಪರಿಸರದ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿ, ಘಟಕದ ವಿಸ್ತರಣೆಗಾಗಿ ನೀಡಿದ್ದ ಭೂಮಿಯ ಮಂಜೂರಾತಿಯನ್ನು ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Next Story

RELATED STORIES