ಟೀಂ ಇಂಡಿಯಾ ವಿರುದ್ಧ ಟೆಸ್ಟ್: ಆಫ್ಘಾನಿಸ್ತಾನ ತಂಡದಲ್ಲಿ ರಶೀದ್

X
TV5 Kannada29 May 2018 2:50 PM GMT
ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಿಂಚು ಹರಿಸಿದ ಸ್ಪಿನ್ನರ್ ರಶೀದ್ ಖಾನ್ ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಪ್ರಕಟಿಸಲಾದ ಆಫ್ಘಾನಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮಂಗಳವಾರ 16 ಆಟಗಾರರ ಆಫ್ಘಾನಿಸ್ತಾನ ತಂಡ ಪ್ರಕಟಿಸಲಾಗಿದೆ. ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ ತಂಡ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನ ಆಡುತ್ತಿದೆ. ಜೂ.14ರಿಂದ 18ರವರೆಗೆ ಟೀಂ ಇಂಡಿಯಾ ವಿರುದ್ಧ ಹೋರಾಡಲಿದೆ. ಕಳೆದ ವರ್ಷವಷ್ಟೆ ಐಸಿಸಿ ಅಫ್ಘಾನಿಸ್ತಾನ ತಂಡಕ್ಕೆ ಟೆಸ್ಟ್ ಮಾನ್ಯತೆ ನೀಡಿತ್ತು.
ತಂಡ: ಅಸ್ಗರ್ ಸ್ಟಾನಿಕಜಾಯಿ (ನಾಯಕ), ಮೊಹ್ಮದ್ ಶಾಜಾದ್, ಜಾವೇದ್ ಅಹ್ಮದಿ, ಇಸಾನುಲ್ಹಾ ಜಾನಾಟ್, ರೆಹಮತ್ ಶಾ, ನಾಸೀರ್ ಜಮಾಲ್, ಹಶಮತುಲ್ಲಾ ಶಾಹೀದಿ, ಅಫ್ಸಾರ್ ಜಾಜಾಯಿ, ಮೊಹ್ಮದ್ ನಬಿ, ರಶೀದ್ ಖಾನ್, ಜಹೀರ್ ಖಾನ್, ಹಮ್ಜಾ ಹೊಟಾಕ್, ಸಯ್ಯದ್ ಸೆರ್ಜಾದ್, ಯಮಿನ್ ಅಹ್ಮದ್ಜಾಯಿ, ವಾಫಾದಾರ್ ಮೊಹ್ಮದ್, ಮುಜೀಬ್-ಉರ್-ರೆಹಮಾನ್
Next Story