Top

ಕೊಲೆಯಲ್ಲಿ ಅಂತ್ಯವಾದ ಪ್ರೇಮ ಪ್ರಕರಣ

ಕೊಲೆಯಲ್ಲಿ ಅಂತ್ಯವಾದ ಪ್ರೇಮ ಪ್ರಕರಣ
X

ಕೇರಳ: ಕೇರಳದಲ್ಲಿ 23ವರ್ಷದ ದಲಿತ ಯುವಕನನ್ನು ಅಪಹರಿಸಿ, ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಕೆಲ ದಿನಗಳ ಹಿಂದಷ್ಟೇ ಕೆವಿನ್.ಪಿ. ಜೋಸೆಫ್ ಮೇಲ್ಜಾತಿಯ ಯುವತಿ ನೀತು ಎಂಬುವವಳನ್ನು ಪ್ರೀತಿಸಿ ವಿವಾಹವಾಗಿದ್ದ. ಎರಡು ವರ್ಷದಿಂದ ಈ ಜೋಡಿ ಪ್ರೀತಿಸಿ, ವಿವಾಹವಾಗಿದ್ದು, ಯುವತಿಯ ಮನೆಯವರು ಈ ಮದುವೆಯಿಂದ ಅಸಮಾಧಾನಗೊಂಡಿದ್ದರು. ಯುವಕ ದಲಿತ ಕ್ರಿಶ್ಚಿಯನ್ ಆಗಿದ್ದು, ಯುವತಿ ಮೇಲ್ಜಾತಿಯ ಕ್ರಿಶ್ಚಿಯನ್ ಆಗಿದ್ದಳು, ಅಲ್ಲದೇ ಯುವಕ ಬಡಕುಟುಂಬದಿಂದ ಬಂದವನಾಗಿದ್ದರಿಂದ ಆತನ ಮೇಲೆ ಯುವತಿಯ ಅಣ್ಣ ಅಸಮಾಧಾನಗೊಂಡಿದ್ದ. ಈ ಕಾರಣಕ್ಕಾಗಿ ನೀತುವಿನ ಮದುವೆ ಬೇರೊಬ್ಬ ಯುವಕನೊಂದಿಗೆ ಮಾಡಲು ನೀತುವಿನ ಅಣ್ಣ ನಿರ್ಧರಿಸಿದ್ದ. ಆದರೆ ನೀತು ಮತ್ತು ಜೋಸೆಫ್ ಮನೆಯವರ ಮಾತು ಮೀರಿ ಮದುವೆಯಾಗಿದ್ದರು.

ಎರಡು ದಿನದ ನಂತರ ಕೆವಿನ್ ಮನೆಗೆ ನುಗ್ಗಿದ ನೀತುವಿನ ಅಣ್ಣ ಮತ್ತು ಹಲವು ಪುಂಡರು, ಆತನನ್ನು ಅಪಹರಿಸಿದ್ದಾರೆ. ಕೆವಿನ್ ತಂದೆ ಜೋಸೆಫ್ ತನ್ನ ಮಗ ಕಾಣೆಯಾಗಿದ್ದಾನೆಂದು ದೂರು ನೀಡಲು ಹೋದಾಗ, ಸಬ್ ಇನ್ಸ್ ಪೆಕ್ಟರ್ ದೂರು ದಾಖಲಿಸಿಕೊಳ್ಳದೇ, ತಾನು ಸಿಎಂ ಜೊತೆ ಬ್ಯುಸಿಯಾಗಿದ್ದೇನೆ ಎಂದು ಕಾರಣ ಹೇಳಿದ್ದಾರೆ. ಆದರೆ ಸೋಮವಾರ ಬೆಳಿಗ್ಗೆ ಕೆವಿನ್ ಮೃತದೇಹ ಕೆರೆಯೊಂದರ ಬಳಿ ಪತ್ತೆಯಾಗಿದೆ.ಯುವತಿಯ ಅಣ್ಣ ಮತ್ತು ಆತನೊಂದಿಗೆ ಇದ್ದ ದುಷ್ಕರ್ಮಿಗಳು ಕೆವಿನ್ ಹತ್ಯೆ ಮಾಡಿದ್ದಾರೆ.ಇನ್ನು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದ ಗಾಂಧಿನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎಮ್.ಎಸ್.ಶಿಬುರನ್ನ ಸಸ್ಪೆಂಡ್ ಮಾಡಲಾಗಿದೆ. ಅಲ್ಲದೇ ಕೊಟ್ಟಯಮ್ ಎಸ್ಪಿ ಮೊಹಮ್ಮದ್ ರಫಿರನ್ನ ಟ್ರಾನ್ಸ್ ಫರ್ ಮಾಡಲಾಗಿದೆ.ಅಲ್ಲದೇ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಪತಿಯ ಸಾವಿನ ಸುದ್ದಿ ಕೇಳಿದ ನೀತು ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Next Story

RELATED STORIES