ಗೆದ್ದ ಸಂಭ್ರಮದಲ್ಲಿ ಪಾರ್ಟಿ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್

X
TV5 Kannada29 May 2018 7:49 AM GMT
ಚೆನ್ನೈ: ಐಪಿಎಲ್ ಚಾಂಪಿಯನ್ನಾಗಿ ಹೊರ ಹೊಮ್ಮಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತಂಡದ ಆಟಗಾರರಿಗೆ ಡಿನ್ನರ್ ಪಾರ್ಟಿ ಹಮ್ಮಿಕೊಂಡಿತ್ತು. ಈ ಕುರಿತು ತಂಡದ ಆಟಗಾರರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
ಮೊನ್ನೆ ಮುಂಬೈನ ವಾಂಖೆಡೆಯಲ್ಲಿ ಸನ್ರೈಸರ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ 8 ವಿಕೆಟ್ ಪಡೆದು ಟ್ರೋಫಿ ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಚೆನ್ನೈ ಫ್ರಾಂಚೈಸಿ ತಂಡದ ಆಟಗಾರರಿಗೆ ಡಿನ್ನರ್ ಪಾರ್ಟಿ ಹಮ್ಮಿಕೊಂಡಿತ್ತು. ಡಿನ್ನರ್ ಪಾರ್ಟಿಯಲ್ಲಿ ತಂಡದ ಎಲ್ಲ ಆಟಗಾರರು ಪಾಲ್ಗೊಂಡಿದ್ದರು. ಈ ಡಿನ್ನರ್ ಪಾರ್ಟಿಯ ಮಾಹಿತಿಯನ್ನ ಆಟಗಾರರಾದ ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ನೀಡಿದ್ದಾರೆ. ಇದು ಚೆನ್ನೈ ತಂಡದ ಕೊನೆಯ ಡಿನ್ನರ್ ಪಾರ್ಟಿ ಮತ್ತೆ ಸಿಗೋಣ ಎಂದು ಹರ್ಭಜನ್ ಸಿಂಗ್ ಟ್ವೀಟರ್ನಲ್ಲಿ ಬರೆದಿದ್ದಾರೆ .
Next Story