Top

ಕರೆನ್ಸಿ ನೋಟ್​​ನಲ್ಲಿ ಅವರಾ.? ಇವರಾ..?

ಕರೆನ್ಸಿ ನೋಟ್​​ನಲ್ಲಿ ಅವರಾ.? ಇವರಾ..?
X

ಭಾರತದ ಕರೆನ್ಸಿ ನೋಟ್​ನಲ್ಲಿ ಮಹಾತ್ಮಾ ಗಾಂಧಿಯವರ ಫೋಟೋ ಇರೊದು ಕಾಮನ್​​. ಆದ್ರೆ ಈಗ ಅಖಿಲ ಭಾರತ ಹಿಂದೂ ಮಹಾಸಭಾದಿಂದ ಹೊಸ ಡಿಮಾಂಡ್​ ಬಂದಿದೆ. ಕರೆನ್ಸಿಗಳಲ್ಲಿ ಮಹಾತ್ಮಾ ಗಾಂಧಿಜಿಯವರ ಫೋಟೋ ತೆಗೆದುಹಾಕಿ, ಸ್ವಾತಂತ್ರ್ಯ ಸೇನಾನಿ ವೀರ್​ ಸಾವರ್ಕರ್​​ ಫೋಟೋ ಹಾಕುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ.

ವೀರ್​ ಸಾವರ್ಕರ್​ಗೆ ಭಾರತ ರತ್ನ ಪ್ರಶಸ್ತಿ ಕೊಡುವಂತೆ ಅಖಿಲ ಭಾರತ ಹಿಂದೂ ಮಹಾಸಭಾದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಒತ್ತಾಯಿಸಿದ್ದಾರೆ. ಸಾವರ್ಕರ್​​ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡ ಹೆಸರು ಮಾಡಿದ್ದರು. ಹೀಗಾಗಿ ಕರೆನ್ಸಿಯಲ್ಲಿ ಸಾವರ್ಕರ್​​ ಭಾವಚಿತ್ರ ಬೇಕು ಎಂದು ಹಿಂದೂ ಮಹಾಸಭಾ ಒತ್ತಾಯಿಸಿದೆ.

Next Story

RELATED STORIES