Top

ಮಲ್ಯ ಜೀವನಚರಿತ್ರೆ ಚಿತ್ರಕ್ಕೆ `ಗೋವಿಂದ' ನಾಯಕ

ಮಲ್ಯ ಜೀವನಚರಿತ್ರೆ ಚಿತ್ರಕ್ಕೆ `ಗೋವಿಂದ ನಾಯಕ
X

ಬ್ಯಾಂಕ್​ಗೆ 9000 ಕೋಟಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಜೀವನ ಆಧರಿಸಿ ಬಾಲಿವುಡ್ ಚಿತ್ರ ಸಿದ್ಧಗೊಳ್ಳಲಿದೆ.

ಪಹ್ಲಾಜ್ ನಿಹಲಾನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ವಿಜಯ್ ಮಲ್ಯ ಅವರ ಪಾತ್ರವನ್ನು ಹಿರಿಯ ನಟ ಗೋವಿಂದ ನಿಭಾಯಿಸಲಿದ್ದಾರೆ.

ಇತ್ತೀಚೆಗಷ್ಟೇ ಗೋವಿಂದ ಅವರನ್ನು ಬಳಸಿಕೊಂಡು ಹಾಡಿನ ದೃಶ್ಯವೊಂದನ್ನು ಚಿತ್ರೀಕರಿಸಲಾಗಿದೆ. ಮಲ್ಯ ಕ್ಯಾಲೆಂಡರ್ ಹೆಸರಿನ ಹಾಡು ಇದಾಗಿತ್ತು.ರಂಗೀಲಾ ರಾಜಾ ಎಂದು ಚಿತ್ರಕ್ಕೆ ಹೆಸರಿಡಲಾಗಿದ್ದು, ಮಲ್ಯ ಅವರ ಕಲರ್​ಫುಲ್ ಜೀವನ ಆಧರಿಸಿ ಚಿತ್ರ ನಿರ್ಮಾಣವಾಗಲಿದೆ.

ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ ಗೋವಿಂದ, ನಾನು ಮಲ್ಯ ಅವರ ತರಹ ಕಾಣುತ್ತಿದ್ದೇನೆ ಎಂಬ ಕಾರಣಕ್ಕೆ ಈ ಅವಕಾಶ ಸಿಕ್ಕಿದೆ ಎಂದಿದ್ದಾರೆ.

Next Story

RELATED STORIES