Top

17.5 ಲಕ್ಷಕ್ಕೆ ಮಾರಿದ್ದ ಆಡಿ ಕಾರು ಕದ್ದು ವಾಪಸ್ ಪಡೆದ ಮಾಲೀಕ!

17.5 ಲಕ್ಷಕ್ಕೆ ಮಾರಿದ್ದ ಆಡಿ ಕಾರು ಕದ್ದು ವಾಪಸ್ ಪಡೆದ ಮಾಲೀಕ!
X

ಐಷಾರಾಮಿ ಕಾರು ಇದ್ದರೆ ಹಾಗೆ. ಅದನ್ನು ಬಿಟ್ಟುಕೊಡುವುದಕ್ಕೆ ಮನಸ್ಸೇ ಆಗುವುದಿಲ್ಲ. ಅದರಲ್ಲೂ ಆಡಿಯಂತಹ ಕಾರು ಆದರೂ ಅಷ್ಟೆ. ಕೆಲವರಂತೂ ಕದ್ದಾದರೂ ಸರಿ ವಾಪಸ್ ಪಡೆಯಲು ಯತ್ನಿಸುತ್ತಾರೆ. ದೆಹಲಿಯಲ್ಲಿ ಇಂತಹದ್ದೊಂದು ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಆಡಿ ಕಾರನ್ನು 17.5 ಲಕ್ಷಕ್ಕೆ ಮಾರಾಟ ಮಾಡಿದ್ದ ಇಂಜಿನಿಯರ್​ವೊಬ್ಬ ಕೆಲವೇ ದಿನಗಳ ನಂತರ ಮಾರಿದ್ದ ಕಾರನ್ನು ಕದ್ದು ಸಿಕ್ಕಿಬಿದ್ದಿದ್ದಾನೆ.

ಮನೋಜ್ ಸಿಂಘಾಲ್ ಎಂಬ ಇಂಜಿನಿಯರ್ ಈ ಕೃತ್ಯ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಮನೋಜ್​ನನ್ನು ಆತನ ತವರಾದ ಉತ್ತರಾಖಂಡ್​ನ ಕಾಶೀಪುರ್​ನಲ್ಲಿ ಬಂಧಿಸಲಾಗಿದ್ದು, ಕಾರನ್ನು

ಪೊಲೀಸರ ಪ್ರಕಾರ ಕಾರು ಮಾರಾಟ ಮಾಡಿದ ನಂತರ ಕೊನೆಯದಾಗಿ ಚೆಕ್ ಪಡೆಯುವಾಗ ದೆಹಲಿ ಮೃಗಾಲಯದ ಬಳಿ ನಕಲಿ ಕೀ ಮಾಡಿಸಿದ್ದ.

ಮಾರ್ಚ್​ 15ರಂದು ಸರ್ಫರಾಜುದ್ದೀನ್ ಪೊಲೀಸರಿಗೆ ದೂರು ನೀಡಿದ್ದು, ತಾನು ಮನೋಜ್ ಸಿಂಘಾಲ್ ಅವರನ್ನು ಭೇಟಿ ಮಾಡಲು ತೆರಳಿದ್ದಾಗ ಮೃಗಾಲಯದ ಬಳಿ ಕಾರು ನಿಲ್ಲಿಸಿದ್ದು ಕಳುವಾಗಿದೆ ಎಂದು ತಿಳಿಸಿದ್ದರು. ಆಡಿ ಕಾರು ಖರೀದಿಸಿದ್ದ ಸರ್ಫರಾಜುದ್ದೀನ್ ಬಾಡಿಗೆ ಬಿಡಲು ನಿರ್ಧರಿಸಿದ್ದರು. ಜಾಹೀರಾತು ನೋಡಿ ಮನೋಜ್ ಅವರನ್ನು ಸಂಪರ್ಕಿಸಿದ ನಂತರ 17.5 ಲಕ್ಷ ರೂ. ನೀಡಿ ಕಾರು ಖರೀದಿಸಿದ್ದರು.

50 ಸಾವಿರ ರೂ. ನಗದು ನೀಡಿದ್ದ ಸರ್ಫರಾಜುದ್ದೀನ್ ನಂತರ 14 ಲಕ್ಷ ರೂ. ಆನ್​ಲೈನ್​ನಲ್ಲಿ ಹಣ ವರ್ಗಾವಣೆ ಮಾಡಿದ್ದರು. ಅಂತಿಮ ಹಂತದಲ್ಲಿ 3 ಲಕ್ಷ ರೂ. ನೀಡಿದಾಗ ಕಾರನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಬಯಸಿದ್ದರು. ಖಾಲಿ ಚೆಕ್ ನೀಡಿದ ಸರ್ಫರಾಜ್​ಖಾನ್, ಕಾರಿನ ಮಾಲೀಕತ್ವದ ಹೆಸರು ಬದಲಿಸಿದ ನಂತರ ಹಣ ಡ್ರಾ ಮಾಡಿಕೊಳ್ಳಲು ಹೇಳಿ ಕಾರು ನಿಲ್ಲಿಸಿದ್ದ ಜಾಗಕ್ಕೆ ಮರಳಿದಾಗ ಕಾರು ನಾಪತ್ತೆಯಾಗಿತ್ತು.

ಪೊಲೀಸರು ತನಿಖೆ ನಡೆಸಿದ ಬೆನ್ನಲ್ಲೇ ಮನೋಜ್ ಸಿಂಘಾಲ್, 6 ಲಕ್ಷ ಬಳಸಿಕೊಂಡಿದ್ದೂ ಅಲ್ಲದೇ ಚೆಕ್​ ಡ್ರಾ ಮಾಡಲು ಹೋದಾಗ ಬ್ಯಾಂಕ್ ಸಿಬ್ಬಂದಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಅಲ್ಲದೇ ಕಾರನ್ನು ಸರ್ಫರಾಜುದ್ದೀನ್ ಕದ್ದಿದ್ದಾರೆ ಎಂದು ಮರು ದೂರು ದಾಖಲಿಸಿದ್ದರು.

Next Story

RELATED STORIES