ಇಂಡೋ-ಪಾಕ್ ಸರಣಿ : ಕೇಂದ್ರಕ್ಕೆ ಬಿಸಿಸಿಐ ಮನವಿ

X
TV5 Kannada29 May 2018 7:15 AM GMT
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಕುರಿತು ತನ್ನ ನಿಲುವಿನ ಕುರಿತು ಸ್ಪಷ್ಟನೆ ನೀಡಬೇಕೆಂದು ಬಿಸಿಸಿಐ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಕಳೆದ ಆರು ವರ್ಷಗಳಿಂದ ಉಭಯ ದೇಶಗಳ ನಡುವೆ ರಾಜಕೀಯ ಅಸ್ಥಿರತೆಯಿಂದಾಗಿ ಭಾರತ ಮತ್ತು ಪಾಕ್ ನಡುವೆ ಕ್ರಿಕೆಟ್ ಸರಣಿಗಳನ್ನ ಆಡಲು ಸಾದ್ಯವಾಗಿಲ್ಲ.
ಪಾಕಿಸ್ತಾನದೊಂದಿಗೆ ಉಭಯ ಸರಣಿ ಆಡಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡುವವರೆಗೂ ತನ್ನ ನಿಲುವನ್ನ ಪ್ರಕಟಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ. 2014ರಲ್ಲಿ ಬಿಸಿಸಿಐ, ಪಿಸಿಬಿಯೊಂದಿಗೆ ದ್ವಿಪಕ್ಷೀಯ ಸರಣಿ ಆಡುವ ಒಪ್ಪಂದ ಮಾಡಿಕೊಂಡಿತ್ತು. ನಂತರ ಗಡಿಯಲ್ಲಿ ಭಯೋತ್ಪಾದಕರ ಅಟ್ಟಹಾಸ ಮಿತಿ ಮೀರಿದಾಗ ದ್ವಿಪಕ್ಷೀಯ ಸರಣಿ ಆಡದಂತೆ ಕೇಂದ್ರ ಸರ್ಕಾರ ಸೂಚಿಸಿತು. ಇದನ್ನು ಖಂಡಿಸಿದ ಪಿಸಿಬಿ ತಮ್ಮೊಂದಿಗೆ ಕ್ರಿಕೆಟ್ ಆಡಬೇಕು ಅಥವಾ ಪರಿಹಾರ ನೀಡಬೇಕೆಂದು ಐಸಿಸಿ ಮೊರೆ ಹೋಗಿತ್ತು.
Next Story