ಅಂಬಿ ನಿಂಗ್ ವಯಸ್ಸಾಯ್ತೋ ಟೀಸರ್ ಬಿಡುಗಡೆ

ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಂಬಿ ನಿಂಗ್ ವಯಸ್ಸಾಯ್ತೋ ಟೀಸರ್ ರಿಲೀಸ್ ಆಗಿದೆ. ಗುರುದತ್ತ ಗಾಣಿಗ ನಿರ್ದೇಶನದ ಈ ಆ್ಯಕ್ಷನ್ ಫ್ಯಾಮಿಲಿ ಎಂಟ್ರಟ್ರೈನರ್ ಚಿತ್ರದ ಅಂಬಿ ಲೀಡ್ ರೋಲ್ ಪ್ಲೇ ಮಾಡ್ತಿದ್ದಾರೆ. ಟೀಸರ್ನಲ್ಲಿ ಮಾಸ್ ಲುಕ್ನಲ್ಲಿ ಅಂಬಿ ಮ್ಯಾಜಿಕ್ ಮಾಡೋ ಸೂಚನೆ ಕೊಟ್ಟಿದ್ದಾರೆ.. ಪ್ರತಿ ಫ್ರೇಮ್ ಸಿಕ್ಕಾಪಟ್ಟೆ ರಿಚ್ ಮತ್ತು ಅಷ್ಟೇ ಕಲರ್ಫುಲ್ ಆಗಿ ಚಿತ್ರ ಮೂಡಿ ಬಂದಿದೆ.
ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಅಂಬಿ ರಿಟೈರ್ಡ್ ಫೈಟ್ ಮಾಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಎಕ್ಸ್ ಸ್ಟಂಟ್ ಮಾಸ್ಟರ್ ಒಬ್ಬರ ಕಥೆ ಹೇಗಿರುತ್ತೆ ಅನ್ನೋ ರೀತಿಯಲ್ಲಿ ಈ ಪಾತ್ರವನ್ನ ಡಿಸೈನ್ ಮಾಡಿದ್ದಾರೆ ನಿರ್ದೇಶಕರು. ಅವ್ರದ್ದೇ ಹೆಸರಿನ ಟೈಟಲ್ ಚಿತ್ರದಲ್ಲಿ ಅವರೇ ಹೀರೋ. ಅಂಬಿ ಯವ್ವನ ದಿನಗಳ ಪಾತ್ರದಲ್ಲಿ ಕಿಚ್ಚ ಸುದೀಪ್ ನಟಿಸಿರೋದು ಮತ್ತೊಂದು ವಿಶೇಷ..
ಅದ್ಭುತ ಭಾವನೆಗಳ ಸಮ್ಮಿಲನ ಕಥೆಯಲ್ಲಿ ಅಂಬಿ, ಸುದೀಪ್ ಅಭಿನಯಕ್ಕೆ ಭರಪೂರ ಅವಕಾಶವಿದೆ.ಇಡೀ ಸಿನಿಮಾ ಅಂಬಿ ಪಾತ್ರದ ಸುತ್ತಾ ಸುತ್ತುತ್ತೆ. 66 ವರ್ಷ ವಯಸ್ಸಾದ್ರೂ ಅಂಬರೀಶ್ ಲೀಲಾಜಾಲವಾಗಿ ಈ ಪಾತ್ರವನ್ನ ನಿಭಾಯಿಸಿದ್ದಾರೆ. ಸುದೀಪ್ ಜೋಡಿಯಾಗಿ ಶ್ರುತಿ ಹರಿಹರನ್, ಅಂಬಿಗೆ ಜೊತೆಯಾಗಿ ಸುಹಾಸಿನಿ ಮಿಂಚಿದ್ದಾರೆ. ಅಂಬಿ ಬರ್ತ್ಡೇ ಸ್ಪೆಷಲ್ ಆಗಿ ಟೀಸರ್ ರಿವೀಲ್ ಮಾಡಿರೋ ಚಿತ್ರತಂಡ ಶೀಘ್ರದಲ್ಲೇ ಆಡಿಯೋ ಲಾಂಚ್ಗೆ ಪ್ಲಾನ್ ಮಾಡಿದೆ.