Top

ದೇವೇಂದ್ರನ ರೀತಿ ಅಧಿವೇಶನ ನಡೆಸೋಕೆ ಆಗಲ್ಲ: ರಮೇಶ್ ಕುಮಾರ್​

ದೇವೇಂದ್ರನ ರೀತಿ ಅಧಿವೇಶನ ನಡೆಸೋಕೆ ಆಗಲ್ಲ: ರಮೇಶ್ ಕುಮಾರ್​
X

ಪವನ್ ಕುಮಾರ್​

ಸದನದಲ್ಲಿ ಚರ್ಚೆಯಾಗದೇ ವಿಧೇಯಕಗಳಿಗೆ ಅನುಮೋದನೆ ಆಗುತ್ತಿರುವುದು ವ್ಯವಸ್ಥೆಯ ಲೋಪ. ನಾನು ಏಕಾಏಕಿ ವಿಧಾನಸಭೆಯನ್ನು ದೇವೇಂದ್ರನ ಸಭೆ ಮಾಡಲು ಆಗಲ್ಲ. ಇದಕ್ಕೆ ರಾಜಕೀಯ ಪಕ್ಷಗಳು ಹೊಣೆ ತಗೆದುಕೊಳ್ಳಬೇಕು ಎಂದು ವಿಧಾನಸಭೆ ಸಭಾದ್ಯಕ್ಷ ರಮೇಶ್ ಕುಮಾರ್ ಹೇಳಿದ್ದಾರೆ.

ಸ್ಪೀಕರ್ ಆದ ಬಳಿಕ ರಮೇಶ್ ಕುಮಾರ್ ಟಿವಿ5ಗೆ ನೀಡಿದ ಸಂದರ್ಶನದಲ್ಲಿ ಸದನದಲ್ಲಿ ಜನಪರ ಸಮಸ್ಯೆಗಳ ಚರ್ಚೆ ಆಗಬೇಕಿದ್ದು, ನಿರೀಕ್ಷೆ ಇಟ್ಟುಕೊಳ್ಳಬೇಕು. ನಾನು ಹಾಗೇ ಕೆಲಸ ಮಾಡ್ತೀನಿ. ಯಾರು ಪಕ್ಷದ ಅಭ್ಯರ್ಥಿ ಆಗಬೇಕು. ಯಾರನ್ನು ಅಭ್ಯರ್ಥಿ ಮಾಡಿದರೆ ಒಳ್ಳೆ ದು ಅನ್ನೋದನ್ನ ರಾಜಕೀಯ ಪಕ್ಷಗಳು ಯೋಚಿಸಬೇಕು ಎಂದು ಹೇಳಿದರು.

ಶಾಸಕರು ಯಾವ ತರಬೇತಿ ಇಲ್ಲದೆ ವಿಧಾನಸಭೆಗೆ ಬರುತ್ತಾರೆ. ಶಾಸಕರಿಗೆ ನಾವು ಹದಿನೈದು ದಿನಗಳ ಕಾಲ ತರಬೇತಿ ಕೊಡುತ್ತೇವೆ. ಆದರೆ ಅವರು ಅದನ್ನ ಎಷ್ಟು ಗಂಭೀರವಾಗಿ ತಗೋತಾರೋ ಗೊತ್ತಿಲ್ಲ. ಕಲಾಪ ವರ್ಷಕ್ಕೆ 60 ದಿನ ನಡೆಸಬೇಕು ಎನ್ನುತ್ತಾರೆ. ಆದರೆ 75 ದಿನ ಯಾಕೆ ಕಲಾಪ ನಡೆಯಬಾರದು? ಶಾಸಕರಾದವರು ಸಮಯಾವಕಾಶ ಸಿಗಬೇಕು. ಸ್ವಂತ ವಿವೇಚನೆಯಿಂದ ಎಲ್ಲರಿಗೂ ಮಾತನಾಡುವ ಅವಕಾಶ ದೊರೆತರೆ ೬೦ ಕ್ಕಿಂತ ಹೆಚ್ಚು ದಿನ ಕಲಾಪ ನಡೆಯುತ್ತೆ. ಶಾಸಕರು ತಯಾರಿ ಮಾಡಿಕೊಂಡು ಅಧ್ಯಯನ ಮಾಡಿಕೊಂಡು ಬಂದು ಮಾತಾಡೋದನ್ನ ಕಲಿಯಬೇಕು ಎಂದು ರಮೇಶ್ ಕುಮಾರ್ ಸಲಹೆ ನೀಡಿದರು.

ಜನಹಿತ ಕಾಪಾಡಲು 60 ದಿನಕ್ಕಿಂತ ಹೆಚ್ಚೂ ಕಲಾಪ ಮಾಡಬಹುದು. ಕಲಾಪಕ್ಕೆ ಶಾಸಕರ ಗೈರು ಹಾಜರಾಗುತ್ತಿರುವುದಕ್ಕೆ ಜನಾನೇ ಹೊಣೆಗಾರರು. ಜನ ಎಂಥವರನ್ನ ಆಯ್ಕೆ ಮಾಡಿ ಕಳಿಸುತ್ತಾರೋ ಅವರೇ ಬಂದಿರ್ತಾರೆ ಎಂದ ಅವರು, ಕಾಗದ ರಹಿತ ಅಧಿವೇಶನ ನಡೆಸುವ ವಿಚಾರವನ್ನು ಸದ್ಯ ಇದನ್ನ ಗಂಭೀರವಾಗಿ ಪರಿಗಣಿಸಿಲ್ಲ. ನಮಗೆ ಮೊಬೈಲ್ ಆಪರೇಟ್ ಮಾಡೋದೇ ಕಷ್ಟ. ಅಲ್ಲದೆ ಟಿವಿ ಕೂಡಾ ಬೇರೆಯವರು ಆನ್ ಆಪ್ ಮಾಡಿ ಕೊಡ್ತಾರೆ. ಅಂದ ಮೇಲೆ ಅತ್ಯಾದುನಿಕವಾಗಿ ಅಧಿವೇಶನ ನಡೆಸೋದು ಕಷ್ಟ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ವಿಧಾನಸಭೆ ಕಾರ್ಯದರ್ಶಿ ಮೂರ್ತಿಯವರ ಮೇಲಿನ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ರಮೇಶ್ ಕುಮಾರ್ ನಿರಾಕರಿಸಿದರು. ನಾವು ಯಾರೂ ವಿಚಾರದಲ್ಲಿಯೂ ಪೂರ್ವಾಗ್ರಹ ಪೀಡಿತರಾಗಬೇಕಿಲ್ಲ. ಇನ್ನೂ ಪ್ರಕರಣದ ಬಗ್ಗೆ ವರದಿನೇ ಬಂದಿಲ್ಲ. ಆಧಾರವೇ ಇಲ್ಲ. ಊಹಾಪೂಹದಿಂದ ಮಾತಾಡಲು ಆಗಲ್ಲ. ಸುಮ್ಮನೆ ಯಾಕೆ ಇನ್ನೊಬ್ಬ ವ್ಯಕ್ತಿಯ ತೇಜೋವಧೆ ಮಾಡಬೇಕು?

ನಾವು ಜವಾಬ್ದಾರಿ ಸ್ಥಾನದಲ್ಲಿ ಇದ್ದೇನೆ. ಸುಮ್ಮನೇ ಮಾತಾಡಲು ಆಗಲ್ಲ ಎಂದರು.

Next Story

RELATED STORIES