Top

ಪತಿ ಕೊಲ್ಲಿಸಿದ ಪತ್ನಿ ಸೇರಿ ಐವರಿಗೆ ಜೀವಾವಧಿ ಶಿಕ್ಷೆ

ಪತಿ ಕೊಲ್ಲಿಸಿದ ಪತ್ನಿ ಸೇರಿ ಐವರಿಗೆ ಜೀವಾವಧಿ ಶಿಕ್ಷೆ
X

ರಾಮನಗರ: ಪತಿ ಕೊಲೆ ಮಾಡಿಸಿದ್ದ ಪತ್ನಿ, ಆಕೆಯ ಪ್ರಿಯಕರ ಸೇರಿದಂತೆ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ರಾಮನಗರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶಿಸಿದೆ.

2015 ಏಪ್ರಿಲ್ 5 ರಂದು ನಡೆದಿದ್ದ ಕೊಲೆ ಪ್ರಕರಣ ಇದಾಗಿದ್ದು, ಆಂಧ್ರ ಮೂಲದ ಗಣೇಶ್ ಕೊಲೆಯಾಗಿದ್ದರು. ಗಣೇಶ್ ಪತ್ನಿ ಸುಕನ್ಯಾ, ಆಕೆಯ ಪ್ರಿಯಕರ ಭರತ್ ಸುಪಾರಿ ನೀಡಿ ಪತಿಯನ್ನು ಕೊಲ್ಲಿಸಿದ್ದರು.

ಆಂಧ್ರದ ಕುಪ್ಪಂ ನಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಲಾಗಿತ್ತು. ಭರತ್, ಸುಕನ್ಯಾ, ವಾಸು, ಅಬ್ದುಲ್ ರಜಾಕ್ ಮತ್ತು ಮಣಿರಾಜು ಜೀವಾವಧಿ ಶಿಕ್ಷೆಗೆ ಒಳಗಾದವರು. ನ್ಯಾಯಾಧೀಶ ಗೋಪಾಲಕೃಷ್ಣ ರೈ ಸೋಮವಾರ ಆದೇಶ ಪ್ರಕಟಿಸಿದರು.

ಗಣೇಶ್​ನನ್ನು ನರ್ಸರಿ ಗಿಡಗಳ ವ್ಯಾಪಾರಕ್ಕೆಂದು ಕರೆಸಿಕೊಂಡು ಕೊಲೆ ಮಾಡಲಾಗಿತ್ತು. ಅಂದಿನ ರಾಮನಗರ ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಕುಮಾರ್ ರಿಂದ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

Next Story

RELATED STORIES