Top

ಉ.ಪ್ರ., ಮಹಾರಾಷ್ಟ್ರ ಉಪ ಚುನಾವಣೆಯಲ್ಲಿ ಇವಿಎಂ ಸಮಸ್ಯೆ: ಬಿಸಿಲು ಕಾರಣ ಅಂತೆ

ಉ.ಪ್ರ., ಮಹಾರಾಷ್ಟ್ರ ಉಪ ಚುನಾವಣೆಯಲ್ಲಿ ಇವಿಎಂ ಸಮಸ್ಯೆ: ಬಿಸಿಲು ಕಾರಣ ಅಂತೆ
X

ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಸೋಮವಾರ ನಡೆದ ವಿವಿಧ ಉಪಚುನಾವಣೆಯಲ್ಲಿ ಇವಿಎಂ ಹಾಗೂ ವಿವಿಪ್ಯಾಟ್​ಗಳಲ್ಲಿ ದೋಷ ಕಂಡು ಬಂದಿದ್ದು, ವಿವಿಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಆದರೆ ದೋಷಕ್ಕೆ ಬಿಸಿಲು ಕಾರಣ ಎಂಬ ಚುನಾವಣಾ ಆಯುಕ್ತರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಸೋಮವಾರ 10 ರಾಜ್ಯಗಳ 14 ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಿತು. ಬಿಜೆಪಿಗೆ ಅತ್ಯಂತ ಮಹತ್ವದಾಗಿರುವ ಉತ್ತರ ಪ್ರದೇಶದ ಕೈರಾನಾ, ಮಹಾರಾಷ್ಟ್ರದ ಪಾಲ್ಗಾರ್, ಬಂಧಾರಾ-ಗೋಂಡ್ಯಾ ಲೋಕಸಭಾ ಕ್ಷೇತ್ರಗಳ ಮತದಾನದ ವೇಳೆ ಇವಿಎಂಗಳಲ್ಲಿ ದೋಷ ಕಂಡು ಬಂದಿತ್ತು.

ಕೈರಾನಾ ಕ್ಷೇತ್ರದಲ್ಲಿ ಆರ್​ಎಲ್​ಡಿ ಪಕ್ಷದ ತಬಸುಮ್ ಹಸನ್ ತಮ್ಮ ಕ್ಷೇತ್ರದ ಅತೀ ದೊಡ್ಡ ಕೇಂದ್ರದ 150 ಮತಗಟ್ಟೆಗಳಲ್ಲಿನ ಇವಿಎಂಗಳಲ್ಲಿ ದೋಷ ಕಂಡು ಬಂದಿದೆ ಎಂದು ದೂರು ನೀಡಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಶೇ.21ರಷ್ಟು ಮತದಾನ ಆಗಿತ್ತು. ಆಗ 10 ಮತಯಂತ್ರಗಳು ಕೆಲಸ ಮಾಡುವುದು ನಿಲ್ಲಿಸಿತ್ತು.

ಮಹಾರಾಷ್ಟ್ರದಲ್ಲಿ ಎನ್​ಸಿಪಿ ಪಕ್ಷ ಕೂಡ ದೂರು ನೀಡಿದ್ದು, ಮತಯಂತ್ರಗಳನ್ನು ನಾಗ್ಪುರದಿಂದ ತರಿಸಿದ್ದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದೆ. ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಚುನಾವಣಾ ಆಯುಕ್ತ ಅತಿಯಾದ ಬಿಸಿಲಿನಿಂದ ಮತಯಂತ್ರಗಳಲ್ಲಿ ದೋಷ ಕಂಡು ಬಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಹೇಳಿಕೆಯಿಂದ ಪ್ರತಿಪಕ್ಷಗಳ ಆಕ್ರೋಶ ಹೆಚ್ಚಾಗಿದ್ದು, ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸಿವೆ.

Next Story

RELATED STORIES