Top

ಸ್ಟೇರ್​ಲೈಟ್ ಶಾಶ್ವತ ಬಂದ್​: ತಮಿಳುನಾಡು ಸರಕಾರ ಘೋಷಣೆ

ಸ್ಟೇರ್​ಲೈಟ್ ಶಾಶ್ವತ ಬಂದ್​: ತಮಿಳುನಾಡು ಸರಕಾರ ಘೋಷಣೆ
X

13 ಜನರನ್ನು ಬಲಿ ತೆಗೆದುಕೊಂಡ ಸ್ಟೇರ್​ಲೈಟ್ ತಾಮ್ರ ಶುದ್ದೀಕರಣ ಘಟಕ ಸ್ಥಾಪನೆ ಪ್ರತಿಭಟನೆಗೆ ಕೊನೆಗೂ ಜಯ ಸಂದಿದೆ. ತಮಿಳುನಾಡು ಸರಕಾರ ಸೋಮವಾರ ತೂತುಕೂಡಿಯಲ್ಲಿನ ಸ್ಟೇರ್​ಲೈಟ್ ಘಟಕವನ್ನು ಶಾಶ್ವತವಾಗಿ ಮುಚ್ಚಲು ಆದೇಶ ಹೊರಡಿಸಿದೆ.

ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಪಳನಿಸ್ವಾಮಿ, ಜನರ ಬಹುದಿನಗಳ ಬೇಡಿಕೆ ಹಾಗೂ ಅವರ ಭಾವನೆಗಳಿಗೆ ಸ್ಪಂದಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಿಸಿದರು.

ಸ್ಟೇರ್​ಲೈಟ್ ಸಂಸ್ಥೆ ವಾಯುಮಾಲಿನ್ಯ ಸೇರಿದಂತೆ ಹಲವಾರು ನಿಯಮಗಳನ್ನು ಉಲ್ಲಂಘಿಸಿದ್ದು ಕೂಡ ಇದೇ ವೇಳೆ ಪ್ರಸ್ತಾಪವಾಗಿದ್ದು, ಘಟಕ ಮುಚ್ಚಲು ಕೇಂದ್ರ ಸರಕಾರ ನೆರವಾಗುವಂತೆ ಪಳನಿಸ್ವಾಮಿ ಮನವಿ ಮಾಡಿದ್ದಾರೆ.

Next Story

RELATED STORIES